ರಾಜ್ಯದಲ್ಲಿ ನಡೆಯುತ್ತಿರುವ ಕೊಲೆಗಳ ಬಗ್ಗೆ ಶಾಕಿಂಗ್ ವಿಚಾರ ಬಿಚ್ಚಿಟ್ಟ ದೇವೇಗೌಡ್ರು.!!

ರಾಜ್ಯದಲ್ಲಿ ನಡೆಯುತ್ತಿರುವ ಕೊಲೆ, ಕೋಮುವಾದಗಳ ವಿಜಯಪುರ ಜಿಲ್ಲೆಯ ಆಲಮಟ್ಚಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಜ್ಯದಲ್ಲಿ ನಡೆಯುತ್ತಿರುವ ಅನಾಹುತಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತ್ರ ಹಸಿವು, ಭಯ, ಶೋಷಣೆ ಮುಕ್ತ ಮತ್ತು ಸಾಮಾಜಿಕ ನ್ಯಾಯದ ಅಡಿಯಲ್ಲಿ ಕರ್ನಾಟಕ ನಿರ್ಮಾಣದತ್ತ ಸರ್ಕಾರ ಎಂದು ಜಾಹೀರಾತು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇವರ ಪ್ರಕಾರ ಕಾಂಗ್ರೆಸ್ ಸಮಾಜ ಸುಧಾರಣೆಗೆ ಹುಟ್ಟಿದವರು, ನಾವು ಶೋಷಣೆಗೆ ಹುಟ್ಟಿದವರ ಎಂದು ವ್ಯಂಗ್ಯವಾಡಿದರು. ಬೆಂಗಳೂರು ನಗರದಲ್ಲಿ ದಿನಕ್ಕೂಂದಂತೆ ಕೊಲೆಯಾಗುತ್ತಿವೆ. ಮಂಗಳೂರು ಮತ್ತು ಉಡುಪಿ ಜನತೆ ಗಡಗಡ ನಡಗುತ್ತಿದ್ದಾರೆ. ಆದರೆ ಸರ್ಕಾರ ಇದನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ ಎಂದು ದೇವೇಗೌಡರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ
ಆದರೆ ನಿಜವಾದ ಅರ್ಥದಲ್ಲಿ ಈ ಎಲ್ಲ ಅಂಶಗಳನ್ನು ಅನುಷ್ಠಾನಕ್ಕೆ ತರಲು ಜೆಡಿಎಸ್ ಬದ್ಧವಾಗಿದೆ. ನಾನು ಮತ್ತು ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ರಾಜ್ಯದ ಜನರು ಈ ರೀತಿ ಭಯಭೀತರಾಗಿದ್ದರೇ ಎಂದು ದೇವೇಗೌಡರು ಪ್ರಶ್ನಿಸಿದರು.
Comments