ರಾಷ್ಟ್ರೀಯ ಪಕ್ಷಗಳ ಜೊತೆ ಮೈತ್ರಿ ಬಗ್ಗೆ ದೇವೆಗೌಡರು ಹೇಳಿದ್ದು ಹೀಗೆ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಹೊರಹಾಕಿ ಬಿಎಸ್‍ಪಿ, ಸಿಪಿಐ ಹಾಗೂ ಇತರೆ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ. 17 ರಂದು ಜೆಡಿಎಸ್ ಹಾಗೂ ಬಿಎಸ್‍ಪಿಯ 20 ಅಭ್ಯರ್ಥಿಗಳ ಮೊದಲ ಪಟ್ಟಿ ಬಡುಗಡೆ ಮಾಡಲಾಗುವುದು. ಬಬಲೇಶ್ವರ ಕ್ಷೇತ್ರದ ಪ್ರಚಾರಕ್ಕೆ ತಾವು ಹಾಗೂ ಮಾಯಾವತಿ ಬರುತ್ತೇವೆ ಎಂದರು.
ಉ-ಕ ಭಾಗದಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ, ಗುಟ್ಟು ಬಿಟ್ಟು ಕೊಡದ ದೇವೆಗೌಡರು ನೋಡೋಣ ಎಂದು ಅಷ್ಟೇ ಎಂದು ಅವರು ತಿಳಿಸಿದರು. ದೇವರ ಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಮಾತನಾಡಿ, ಪಕ್ಷ ಸಂಘಟನೆಗೆ ಎಂಟು ರಾಜ್ಯಗಳ ನಾಯಕರ ತಂಡ ರಚಿಸಲಾಗಿದೆ. ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವರು ಎಂದರು.
Comments