ಚುನಾವಣೆಯಲ್ಲಿ ರಾಮಬಾಣ ಪ್ರಯೋಗಿಸಲಿರುವ ಬಿಜೆಪಿ ..!!

ಉತ್ತರಪ್ರದೇಶದಿಂದ ಕರ್ನಾಟಕಕ್ಕೆ ರಾಮರಾಜ್ಯ ರಥಯಾತ್ರೆ ಬರಲಿದ್ದು, 6 ರಾಜ್ಯಗಳಲ್ಲಿ ರಥ ಸಂಚರಿಸಲಿದೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ನಡೆಯಲಿರುವ ಈ ಯಾತ್ರೆ ಉತ್ತರಪ್ರದೇಶದ ಲಕ್ನೋದಿಂದ ಫೆಬ್ರವರಿ 13ರಿಂದ ಹೊರಡಲಿದ್ದು, ಫೆ.25ಕ್ಕೆ ತಮಿಳುನಾಡಿನ ರಾಮೇಶ್ವರದಲ್ಲಿ ಕೊನೆಗೊಳ್ಳಲಿದೆ.ಫೆ.13ರಿಂದ ಆರಂಭವಾಗುವ ಯಾತ್ರೆ 39 ದಿನಗಳ ಕಾಲ ನಡೆಯಲಿದೆ. ಈ ವೇಳೆ ಸುಮಾರು 40 ಸಾರ್ವಜನಿಕ ಸಭೆಗಳು ಆಯೋಜನೆ ಮಾಡಲಾಗುತ್ತಿದೆ.
ಈ ಸಭೆಗಳಲ್ಲಿ ಪ್ರಮುಖವಾಗಿ ರಾಮಮಂದಿರ ನಿರ್ಮಾಣದ ಕುರಿತು ಚರ್ಚೆ ನಡೆಯಲಿದೆ. ಈ ವರ್ಷ ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆ ಸೇರಿದಂತೆ, ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ರಾಮಮಂದಿರ ವಿಚಾರವನ್ನೇ ಪ್ರಮುಖ ಆಸ್ತ್ರವಾಗಿ ಬಿಜೆಪಿ ಬಳಕೆ ಮಾಡುವ ಸಾಧ್ಯತೆಗಳಿವೆ. ಯಾತ್ರೆಗೆ ಉತ್ತರಪ್ರದೇಶದ ಕರಸೇವಾಕಪುರದಿಂದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರು ಚಾಲನೆ ನೀಡಲಿದ್ದಾರೆ. ಉತ್ತರ ಪ್ರದೇಶದಿಂದ ಆರಂಭವಾಗುವ ಯಾತ್ರೆ ಮಧ್ಯಪ್ರದೇಶ, ಮಹಾರಾಷ್ಟ್ರ ಮೂಲಕ ಕರ್ನಾಟಕ್ಕೆ ಪ್ರವೇಶ ಪಡೆಯಲಿದ್ದು, ನಂತರ ಕೇರಳಕ್ಕೆ ಸಾಗಿ ತಮಿಳುನಾಡಿನ ರಾಮೇಶ್ವರದಲ್ಲಿ ಅಂತ್ಯಗೊಳ್ಳಲಿದೆ. 1990ರ ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ರಾಮ ರಥ ಯಾತ್ರೆ ನಡೆಸಿದ್ದರು. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಪ್ರಮುಖ ರಾಜಕೀಯ ಪಕ್ಷವಾಗಿ ಬೆಳೆಯುವಂತೆ ಮಾಡಿದ್ದರು.
Comments