ಶ್ರವಣಬೆಳಗೊಳದಲ್ಲಿ ದೇವೇಗೌಡರಿಗೆ ಅಪಮಾನ: ಹೆಚ್.ಡಿ.ರೇವಣ್ಣ

ಶ್ರವಣಬೆಳಗೊಳದಲ್ಲಿ 88ನೇ ಮಹಾಮಸ್ತಕಾಭಿಷೇಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಮಾತನಾಡಲು ಅವಕಾಶ ನೀಡದಿರುವುದು ಮತ್ತು ಮಾಜಿ ಸಚಿವ ಹೆಚ್. ಡಿ. ರೇವಣ್ಣರಿಗೆ ಅವಮಾನಿಸಲಾಗಿದೆ ಎಂಬ ವಿಷಯ ವಿಧಾನಸಭೆಯಲ್ಲಿ ಇಂದುವಿಧಾನ ಸಭಾ ಕಲಾಪದಲ್ಲಿ ಚರ್ಚೆಗೀಡಾಗಿತ್ತು.
ಈ ವಿಷಯ ಪ್ರಸ್ತಾಪಿಸಿ ಮಾತನಾಡಿದ ಹೆಚ್.ಡಿ.ರೇವಣ್ಣ, ಶ್ರವಣಬೆಳಗೊಳ ಇರುವುದು ಹಾಗೂ ಜಿಲ್ಲೆಯ ಶಾಸಕನಾಗಿದ್ದರೂ ವೇದಿಕೆಗೆ ಆಹ್ವಾನ ನೀಡದ ಕ್ರಮವನ್ನು ಖಂಡಿಸಿ ಹಕ್ಕುಚ್ಯುತಿ ಮಂಡಿಸಿದರು. ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿ, ಬೇರೆ ಎಲ್ಲ ಶಾಸಕರನ್ನು ಕರೆದು ನಮ್ಮನ್ನು ಅವಮಾನ ಮಾಡುತ್ತೀರಿ. ನಮಗೆ ಮಾನ ಮರ್ಯಾದೆ ಇಲ್ಲವೇ ಎಂದು ರೇವಣ್ಣ ಪ್ರಶ್ನಿಸಿದರು. ರಾಷ್ಟ್ರಪತಿಗಳು ಕರೆ ಮಾಡಿ ಹಾಗೂ ಸ್ವಾಮೀಜಿಗಳು ಕಣ್ಣೀರು ಹಾಕಿದ್ದರಿಂದ ದೇವೇಗೌಡರು ವೇದಿಕೆ ಮೇಲೆ ಏರಿದ್ದರು. ಇಲ್ಲದಿದ್ದರೆ ಆ ಕಡೆ ತಲೆ ಕೂಡ ಹಾಕುತ್ತಿರಲಿಲ್ಲ ಎಂದು ಕಿಡಿಕಾರಿದ ರೇವಣ್ಣ ಸದನದ ಬಾವಿಗಿಳಿದು ಧರಣಿ ನಡೆಸಿದರು. ಇದಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕೃಷಿ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಮತ್ತಿತರರು, ರಾಷ್ಟ್ರಪತಿಗಳು ಭಾಗವಹಿಸಿದ್ದ ಕಾರ್ಯಕ್ರಮ ಯಾರೆಲ್ಲಾ ಮಾತನಾಡಬೇಕು ಎನ್ನುವುದನ್ನು ನಿಮಿಷ, ನಿಮಿಷಕ್ಕೂ ಅವರೇ ಪಟ್ಟಿ ಮಾಡಿ ಕಳುಹಿಸಿರುತ್ತಾರೆ.
Comments