ಚಾಮುಂಡೇಶ್ವರಿ ಚುನಾವಣಾ ಅಖಾಡದಲ್ಲಿ ಸ್ಟಾರ್ ನಟರ ಕಾರು-ಬಾರು..!!

ಮತದಾರರನ್ನು ಸೆಳೆಯಲು ಚಿತ್ರನಟರ ಮೊರೆ ಹೋಗಿರುವುದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈಗ ನಡೆದಿರುವ ಕುತೂಹಲಕಾರಿ ಬೆಳವಣಿಗೆಗೆ ಕಾರಣವಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡುತ್ತಿದ್ದಂತೆ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಅಲ್ಲದೆ ಜೆಡಿಎಸ್ ನ ಹಾಲಿ ಶಾಸಕ ಜಿ. ಟಿ ದೇವೇಗೌಡ ಅವರು ತಂತ್ರಗಳನ್ನು ಬದಲಾಯಿಸಿಕೊಂಡು ತಿರುಗೇಟು ನೀಡಲು ಸಜ್ಜಾಗುತ್ತಿದ್ದಾರೆ.
ಬಿಜೆಪಿ ತನ್ನ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿದೆ. ಮುಖ್ಯಮಂತ್ರಿ ಆಪ್ತ ಜಿಲ್ಲಾ ಪಂಚಾಯಿತಿ ಸದಸ್ಯ ರಾಕೇಶ್ ಪಾಪಣ್ಣ ಅವರು ಈಗಾಗಲೇ ದರ್ಶನ್, ಸೃಜನ್ ಲೋಕೇಶ್ ಅವರನ್ನು ಕರೆಸಿ ಕ್ಷೇತ್ರದಲ್ಲಿ ಕಾರ್ಯಕ್ರಮ ಸಹ ಆಯೋಜಿಸಿದ್ದರು. ಸಿದ್ದರಾಮಯ್ಯ ಅವರಿಗಿಂತ ಸ್ಟಾರ್ ಪ್ರಚಾರಕರು ಯಾರಿದ್ದಾರೆ ? ಎಂಬುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನದಲ್ಲಿರುವ ಪ್ರಶ್ನೆ. ಆದರೆ ರಾಜ್ಯದ ಎಲ್ಲ ಕ್ಷೇತ್ರಗಳ ಹೊಣೆ ಅವರ ಮೇಲೆ ಇರುವುದರಿಂದ ಚಾಮುಂಡೇಶ್ವರಿ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗದೆ ಇರಬಹುದು. ಕಾಂಗ್ರೆಸ್ ಗಿಂತ ನಾವೇನು ಕಡಿಮೆ ಇಲ್ಲವೆಂದು ಜೆಡಿಎಸ್ ಕೂಡ ಸ್ಟಾರ್ ನಟರೊಬ್ಬರನ್ನು ಪ್ರಚಾರದ ಕಣಕ್ಕಿಳಿಸಲಿದೆ.
ಜೆಡಿಎಸ್ ಕೂಡ ಇದಕ್ಕೆ ಹಿಂದೆ ಬಿದ್ದಿಲ್ಲ. ಕೆಲವೆಡೆ ದರ್ಶನ್ ಕಟೌಟ್ ಜೊತೆ ಈ ಪಕ್ಷದ ಮುಖಂಡರ ಭಾವಚಿತ್ರಗಳು ರಾರಾಜಿಸುತ್ತಿವೆ. ಅಲ್ಲದೆ ಸುದೀಪ್ ಅವರನ್ನು ಕರೆತರುವಂತೆ ಪಕ್ಷದ ಯುವ - ಕಾರ್ಯಕರ್ತರು ಮುಖಂಡರನ್ನು ಒತ್ತಾಯಿಸಿದ್ದಾರೆ. ಕೆಲವರು ಚಿತ್ರನಟರನ್ನು ಕರೆತಂದು ಕಾರ್ಯಕ್ರಮವನ್ನು ಸಹ ಆಯೋಜಿಸುತ್ತಿದ್ದಾರೆ. ಚಿತ್ರನಟರನ್ನು ಕರೆತರುವ ಬಗ್ಗೆ ಕ್ಷೇತ್ರದ ನಮ್ಮ ಪಕ್ಷದ ಯುವ ಕಾರ್ಯಕರ್ತರು ಬೇಡಿಕೆ ಇಟ್ಟಿದ್ದು ನಿಜ. ಅಭಿಮಾನದಿಂದ ನಟರನ್ನು ನೋಡಲು ಜನ ಬರಬಹುದು. ಆದರೆ ಆ ಅಭಿಮಾನ ಮತವಾಗಿ ಪರಿವರ್ತನೆ ಆಗಲಾರದು. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಈ ಯೋಜನೆ ಯಶಸ್ವಿಯಾಗಲಿಲ್ಲ ಎಂದು ಜೆಡಿಎಸ್ ಮುಖಂಡ ಬೀರಿಹುಂಡಿ ಬಸವಣ್ಣ ಪ್ರತಿಕ್ರಿಯಿಸಿದರು.
Comments