ಮಂಡ್ಯ ವಿಕಾಸವಾಹಿನಿಯಲ್ಲಿ ಕುಮಾರಣ್ಣನ ತಿಳಿದುಕೊಂಡದ್ದು ಹೀಗೆ!

08 Feb 2018 10:48 AM | Politics
445 Report

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಇನ್ನೂ ಉಳಿಸಿಕೊಂಡಿದೆ ಎಂಬುದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹಮ್ಮಿಕೊಂಡಿರುವ ಕುಮಾರಪರ್ವ ವಿಕಾಸ ವಾಹಿನಿ ಯಾತ್ರೆಗೆ ಹರಿದು ಬರುತ್ತಿರುವ ಜನಸ್ತೋಮವೇ ಸಾಕ್ಷಿಯಾಗಿದೆ.

ಇಲ್ಲಿನ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಜೆಡಿಎಸ್ ಈ ಹಿಂದೆ ಜೆಡಿಎಸ್ ಗೆಲುವು ಸಾಧಿಸಿತ್ತು. (ಈ ಪೈಕಿ ಇಬ್ಬರು ಶಾಸಕರಾದ ಚೆಲುವರಾಯಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ಅವರು ಬಂಡಾಯ ಎದ್ದಿದ್ದು ಕಾಂಗ್ರೆಸ್‍ ನ ಅಂಗಳದಲ್ಲಿದ್ದಾರೆ.) ಆದರೂ ಜೆಡಿಎಸ್ ನ ರಾಷ್ಟ್ರಾಧ್ಯಕ್ಷರಾದ ಹೆಚ್.ಡಿ.ದೇವೇಗೌಡರಾಗಲೀ, ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರ ಸ್ವಾಮಿಯಾಗಲೀ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಪರ್ಯಾಯ ನಾಯಕರನ್ನು ಅವರ ವಿರುದ್ಧ ಸ್ಪರ್ಧೆಗೊಡ್ಡಲು ತಯಾರಿ ನಡೆಸಿದ್ದಾರೆ.ಇದೀಗ ಕುಮಾರಸ್ವಾಮಿ ಅವರ ಕುಮಾರಪರ್ವ ವಿಕಾಸ ವಾಹಿನಿ ಯಾತ್ರೆ ಜಿಲ್ಲೆಗೆ ಕಾಲಿಟ್ಟಿದ್ದು, ಜನಸಾಗರ ಹರಿದು ಬರುತ್ತಿರುವುದನ್ನು ನೋಡಿದ ಕುಮಾರಸ್ವಾಮಿ ಅವರಿಗೆ ಒಂದಷ್ಟು ಧೈರ್ಯ ಬಂದಂತಾಗಿದೆ. ಮಂಡ್ಯದ ಜನ ಕೈಹಿಡಿಯುತ್ತಾರೆ ಎಂಬ ನಿರೀಕ್ಷೆ ಮೂಡಿದೆ. ಈಗಾಗಲೇ ಪಕ್ಷದಿಂದ ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ನ ಸಂಭಾವನೀಯ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದರಿಂದಾಗಿ ಅವರ ಪರವಾಗಿಯೇ ಪ್ರಚಾರ ಮಾಡುತ್ತಿರುವುದು ವಿಶೇಷವಾಗಿದೆ.

Edited By

Shruthi G

Reported By

Shruthi G

Comments