ಪ್ರಧಾನಿ ಮೋದಿ ಭಾಷಣಕ್ಕೆ ವಿರೋಧ ವ್ಯೆಕ್ತಪಡಿಸಿದ ಸಚಿವೆ ಉಮಾಶ್ರೀ
ಶಿವಮೊಗ್ಗದಲ್ಲಿ ಮಾತನಾಡಿದ ಸಚಿವೆ ಉಮಾಶ್ರೀ ಅವರು, ಪ್ರಧಾನ ಮಂತ್ರಿ ವಿರೋಧ ಪಕ್ಷದವರು. ಅವರು ನಮ್ಮನ್ನು ಹೊಗಳಲಿ ಎಂದು ನಾವು ಬಯಸುವುದಿಲ್ಲ. ಆದರೆ ಶೇ.10 ಸರ್ಕಾರ ಎಂದು ಯಾವುದೇ ದಾಖಲೆಗಳು ಇಲ್ಲದ ಮಾತನಾಡಿದ್ದಾರೆ. ಇದು ಪ್ರಧಾನಿ ಆದವರಿಗೆ ಶೋಭೆಯಲ್ಲ ಇದನ್ನ ಖಂಡಿಸುತ್ತೇನೆ ಎಂದು ಹೇಳಿದ್ರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಪ್ರಧಾನಿ ಮೋದಿ ಭಾಷಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರವನ್ನು ನಂಗನಾಚ್ ಸರ್ಕಾರ ಎನ್ನುವ ಮೂಲಕ ಕಳಪೆ ಪದ ಬಳಕೆ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಾವಣೆ ಮಾಡುವುದಿಲ್ಲ. ತೇರದಾಳ ಕ್ಷೇತ್ರದಿಂದಲೇ ಈ ಬಾರಿಯೂ ಸ್ಪರ್ಧೆ. ಕ್ಷೇತ್ರ ಬದಲಾವಣೆಗೆ ಕಾರಣಗಳಿಲ್ಲ ಎಂದು ಉಮಾಶ್ರೀ ಪ್ರತಿಕ್ರಿಯೆ ನೀಡಿದ್ರು. ನಾಟಕ ಅಕಾಡೆಮಿ ಲೋಗೋ ಬದಲಾವಣೆ ಮಾಡುವುದಿಲ್ಲ. ಪ್ರಶಸ್ತಿ ಫಲಕದಲ್ಲಿ ಮಾತ್ರ ಬದಲಾವಣೆ ಆಗಿದೆ ಎಂದು ಸಚಿವೆ ತಿಳಿಸಿದ್ರು.
Comments