ಕಾಂಗ್ರೆಸ್ ಸಂಸದೆ ರಮ್ಯಾ ವಿರುದ್ಧ ದೂರು ದಾಖಲು
ರಮ್ಯಾ ಅವರು ನೀಡಿದ್ದ ಹೇಳಿಕೆ ಭಾರೀ ಸಂಚಲನ ಮೂಡಿಸಿದ್ದು, ಚರ್ಚೆಗೆ ಕಾರಣವಾಗಿದೆ. ಫೇಕ್ ಅಕೌಂಟ್ ತೆರೆಯುವ ಬಗ್ಗೆ ಹೇಳಿಕೆ ನೀಡಿರುವ ರಮ್ಯಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಬಿ.ಜೆಪಿ. ಮುಖಂಡರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಚುನಾವಣೆಯಲ್ಲಿ ಸೋಷಿಯಲ್ ಮೀಡಿಯಾವನ್ನು ರಾಜಕೀಯ ಪಕ್ಷಗಳು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾಗಿವೆ ಎಂದು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಬಿ.ಜೆ.ಪಿ. ದೂರು ನೀಡಿದೆ. ಒಂದೇ ಹೆಸರಲ್ಲಿ 2 -3 ಖಾತೆಗಳನ್ನು ಹೊಂದುವುದು ತಪ್ಪೇನಲ್ಲ ಎಂದು ರಮ್ಯಾ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಕಾರ್ಯಾಗಾರದಲ್ಲಿ ಹೇಳಿದ್ದು ವೈರಲ್ ಆಗಿತ್ತು.
Comments