ಮತ್ತೊಂದು ವಿವಾದಾತ್ಮಕ ಟ್ವೀಟ್ ಗೆ ಸಿಲುಕಿದ ರಮ್ಯಾ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ನಶೆಯಲ್ಲಿ ಮಾತನಾಡುತ್ತಾರೆ ಎಂದು ಅವರ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿ ಸುದ್ದಿಯಾಗಿದ್ದ ರಮ್ಯಾ, ಇದೀಗ ಸ್ವತಃ ವಿವಾದದಲ್ಲಿ ಸಿಲುಕಿದ್ದು, ಆಡಿಕೊಳ್ಳುವವರೆದುರು ಎಡವಿ ಬಿದ್ದಂತಾಗಿದೆ.
ಸಾಮಾಜಿಕ ಜಾಲತಾಣಹಳಲ್ಲಿ ನಕಲಿ ಖಾತೆ ತೆರೆಯುವುದು ಹೇಗೆ ಮತ್ತು ಅವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಪಾಠ ಮಾಡುತ್ತಿರುವ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕನ್ನಡದ ಖ್ಯಾತ ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ, ತಮ್ಮ ಅನುಯಾಯಿಗಳಿಗೆ, ಕಾರ್ಯಕರ್ತರಿಗೆ ನಕಲಿ ಖಾತೆ ಸೃಷ್ಟಿಸುವ ಕುರಿತು ಪಾಠ ಹೇಳುತ್ತಿದ್ದಾರೆ.'ನಕಲಿ ಖಾತೆ ಹೊಂದುವುದು ತಪ್ಪಲ್ಲವೇ?' ಎಂದು ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮ್ಯಾ, 'ಅದರಲ್ಲಿ ತಪ್ಪೇನಿದೆ?, ನಿಜ ಹೇಳಬೇಕೆಂದರೆ ನಂದೂ ಒಂದು ನಕಲಿ ಖಾತೆಯಿದೆ' ಎಂದು ಉತ್ತರಿಸಿದ್ದಾರೆ.
Comments