ಮೇಲುಕೋಟೆ ಕ್ಷೇತ್ರದಿಂದ ಭರ್ಜರಿಯಾಗಿ ಗೆಲುವು ಸಾಧಿಸುತ್ತೇನೆ : ಜೆಡಿಎಸ್ ನಾಯಕ ಪುಟ್ಟರಾಜು

ಸಿಐಡಿ ಅಸ್ತ್ರ ಬಳಸಿ ನನ್ನನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಮಂಡ್ಯ ಸಂಸದ ಪುಟ್ಟರಾಜು ಗಂಭೀರ ಆರೋಪ ಮಾಡಿದ್ದಾರೆ.ಮಂಡ್ಯ ಜಿಲ್ಲೆಯ ಪಾಂಡವಪುರದ ಚಿನಕುರಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿಐಡಿ ಅಸ್ತ್ರ ಬಳಕೆ ಮಾಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ಹೆಸರಿನಲ್ಲಿ ನನ್ನನ್ನು ರಾಜಕೀಯವಾಗಿ ಮುಗಿಸಲು ಕೆಲವರು ಹೊರಟಿದ್ದಾರೆ. ಉದ್ದೇಶಪೂರ್ವಕವಾಗಿ ಸಿಓಡಿ ತನಿಖೆ ಹೆಸರಿನಲ್ಲಿ ನನಗೆ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅರೋಪಿಸಿದರು.
ಒಂದು ವೇಳೆ ನಾನು ಜೈಲಿಗೆ ಹೋದರೂ ಜೈಲಿನಲ್ಲೆ ಮುಂದಿನ ವಿಧಾನಸಭೆಯಲ್ಲಿ ಬಿಫಾರಂ ಹಾಕಿ ಕ್ಷೇತ್ರದ ಜನತೆಯ ಆರ್ಶೀವಾದ ಪಡೆಯುತ್ತೇನೆ. ಮೇಲುಕೋಟೆ ಕ್ಷೇತ್ರದಿಂದ ಭರ್ಜರಿಯಾಗಿ ಗೆಲುವು ಸಾಧಿಸುತ್ತೇನೆ. ಕ್ಷೇತ್ರದ ಜನತೆ ಭಯಪಡುವುದು ಬೇಡ ಎಂದರು.ಕಳೆದ ಒಂದು ವಾರದ ಹಿಂದೆ ಮಂಡ್ಯ ಜಿಲ್ಲೆಯ 4 ಅಕ್ರಮ ಗಣಿಗಾರಿಕೆ ಪ್ರಕರಣ ಸಿಐಡಿ ತನಿಖೆಗೆ ಕಲ್ಪಿಸಲಾಗಿತ್ತು. ಅದರಲ್ಲಿ ಸಂಸದ ಪುಟ್ಟರಾಜು ವಿರುದ್ಧ ಕೇಳಿ ಬಂದಿರುವ ಆರೋಪವನ್ನೂ ಸಿಐಡಿಗೆ ವಹಿಸಲಾಗಿತ್ತು.
Comments