ವಿಭಿನ್ನ ಪ್ರಣಾಳಿಕೆ ರೂಪಿಸುವತ್ತ ಚಿತ್ತ ಹರಿಸಿರುವ ಜೆಡಿಎಸ್..!

06 Feb 2018 1:51 PM | Politics
484 Report

 ಜನರ ಸಮಸ್ಯೆಗಳನ್ನೇ ಪ್ರಣಾಳಿಕೆಯಲ್ಲಿ ಬಂಡವಾಳ ಮಾಡಿಕೊಳ್ಳಲು ನಿರ್ಧರಿಸಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ವಿಭಿನ್ನ ಪ್ರಣಾಳಿಕೆ ರೂಪಿಸಲು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ನೇತೃತ್ವದಲ್ಲಿ ಸಮಿತಿ ರಚಿಸಲು ಜೆಡಿಎಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ರೈತರನ್ನೇ ಕೇಂದ್ರವಾಗಿಟ್ಟುಕೊಂಡು ಹಿಂದಿನ ಎಲ್ಲ ಚುನಾವಣೆಗಳನ್ನು ಎದುರಿಸುತ್ತ ಬಂದಿರುವ ಪಕ್ಷ, ಈ ಬಾರಿ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರ ಅಗತ್ಯಗಳಿಗೆ ಸಮಾನವಾಗಿ ಸ್ಪಂದಿಸಲು ತಂತ್ರ ರೂಪಿಸಿದೆ.

ಜನರ ಸಮಸ್ಯೆಗಳನ್ನೇ ಪ್ರಣಾಳಿಕೆಯಲ್ಲಿ ಬಂಡವಾಳ ಮಾಡಿಕೊಳ್ಳಲು ನಿರ್ಧರಿಸಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ವಿಭಿನ್ನ ಪ್ರಣಾಳಿಕೆ ರೂಪಿಸಲು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ನೇತೃತ್ವದಲ್ಲಿ ಸಮಿತಿ ರಚಿಸಲು ಜೆಡಿಎಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ರೈತರನ್ನೇ ಕೇಂದ್ರವಾಗಿಟ್ಟುಕೊಂಡು ಹಿಂದಿನ ಎಲ್ಲ ಚುನಾವಣೆಗಳನ್ನು ಎದುರಿಸುತ್ತ ಬಂದಿರುವ ಪಕ್ಷ, ಈ ಬಾರಿ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರ ಅಗತ್ಯಗಳಿಗೆ ಸಮಾನವಾಗಿ ಸ್ಪಂದಿಸಲು ತಂತ್ರ ರೂಪಿಸಿದೆ. ಈಗಾಗಲೇ ಯುವಕರು, ಹಿರಿಯ ನಾಗರಿಕರು, ದಲಿತರು, ರೈತರು, ಮಹಿಳೆಯರ ಸಮಾವೇಶ ಹಾಗೂ ಸಂವಾದಗಳನ್ನು ನಡೆಸುವ ಮೂಲಕ ಜನರಿಂದಲೇ ಪ್ರಣಾಳಿಕೆಗೆ ಬೇಕಾಗಿರುವ ಸರಕನ್ನು ಹೆಚ್.ಡಿ. ಕುಮಾರಸ್ವಾಮಿ ಪಡೆದುಕೊಂಡಿದ್ದಾರೆ.

70 ವರ್ಷ ಮೇಲ್ಪಟ್ಟವರಿಗೆ 6 ಸಾವಿರ ರೂ. ಮಾಸಾಶನ, ಗಿಡ ನೆಟ್ಟು ಪೋಷಿಸುವ, ನಿರುದ್ಯೋಗಿ ಯುವಕರಿಗೆ ಮಾಸಿಕ 6 ಸಾವಿರ ರೂ. ನೆರವು, ಸಾವಯವ ಕೃಷಿ ಉತ್ಪನ್ನಗಳಿಗೆ ವ್ಯವಸ್ಥಿತ ಮಾರುಕಟ್ಟೆ ಸೌಲಭ್ಯ, ಅವೈಜ್ಞಾನಿಕ ಕೃಷಿ ಹೊಂಡಗಳ ಬದಲು ಚೆಕ್ ಡ್ಯಾಂ ನಿರ್ಮಾಣ, ಇಸ್ರೇಲ್ ಮಾದರಿ ಅತ್ಯಾಧುನಿಕ ಕೃಷಿ ಪದ್ಧತಿ ಅಳವಡಿಕೆಗೆ ಉತ್ತೇಜನ, ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ, ಗರ್ಭಿಣಿ ಹಾಗೂ ತಾಯಂದಿರಲ್ಲಿ ಅಪೌಷ್ಟಿಕತೆ ನೀಗಿಸಲು 9 ತಿಂಗಳು ಮಾಸಿಕ 6 ಸಾವಿರ ಪ್ರೋತ್ಸಾಹ ಧನ ಸೇರಿ ಬಡವರಿಗೆ ನೇರವಾಗಿ ತಲುಪುವ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಕಾರ್ಯತಂತ್ರ ರೂಪಿಸಿದೆ ಎನ್ನಲಾಗಿದೆ. 

Edited By

Shruthi G

Reported By

Madhu shree

Comments