ಸಾರಿಗೆ ಇಲಾಖೆಯ ವಿರಳ ಸಂಚಾರ ದಿನಕ್ಕೆ ನಟ ಯಶ್ ರಾಯಭಾರಿ

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾರಿಗೆ ಸಚಿವ ಹೆಚ್.ಎಂ ರೇವಣ್ಣ ಅವರು, ಈ ಕಾರ್ಯಕ್ರಮಕ್ಕೆ ಚಿತ್ರ ನಟ ಯಶ್ ರಾಯಭಾರಿ ಆಗಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಕೂಡ ಕಾರ್ಯಕ್ರಮಕ್ಕೆ ಸಾಥ್ ನೀಡಲಿದ್ದು, ಯೋಗರಾಜ್ ಭಟ್ ಪರಿಸರ ಕುರಿತು ಕವಿತೆ ವಾಚನ ಮಾಡಲಿದ್ದಾರೆ ಎಂದರು.
ರಾಜ್ಯ ಸರ್ಕಾರದ ಕುರಿತು ಪ್ರಧಾನಿ ಮೋದಿ ಹೇಳಿಕೆಯನ್ನು ಸಚಿವ ರೇವಣ್ಣ ಖಂಡಿಸಿದರು. ಪರ್ಸೆಂಟೇಜ್ ಹೇಳಿಕೆ ಪ್ರಧಾನಿ ಘನತೆಗೆ ತಕ್ಕದ್ದಲ್ಲ, ಭಾಷಣದ ವೇಳೆ ಪ್ರಧಾನಿ ನಂಗಾ ನಾಚ್ ಅಂತ ಹೇಳಿದ್ದಾರೆ, ಪ್ರಧಾನಿ ಆಗಿ ಅಷ್ಟು ಕೀಳು ಮಟ್ಟದ ಭಾಷೆ ಉಪಯೋಗಿಸುವುದು ಸರಿ ಅಲ್ಲ, ಬಿಜೆಪಿಯವರು ಕೌರವ ದುರ್ಯೋಧನನ ವರ್ತನೆಯನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಕಾಗಿನೆಲೆ ಕನಕ ಗುರು ಪೀಠದ ರಜತ ಮಹೋತ್ಸವ ಕಾರ್ಯಕ್ರಮ ಫೆಬ್ರವರಿ 8-9 ರಂದು ನಡೆಯಲಿದೆ. ಹರಿಹರದ ಬೆಳ್ಳೂಡಿ ಶಾಖಾ ಮಠದಲ್ಲಿ ಕಾರ್ಯಕ್ರಮ ಹಾಗೂ ಐಎಎಸ್, ಕೆಎಎಸ್ ತರಬೇತಿ ಕೇಂದ್ರ ಉದ್ಘಾಟನೆ ಮಾಡಲಾಗುತ್ತದೆ. ಸುಮಾರು 5 ಲಕ್ಷ ಜನ ಸೇರೊ ನಿರೀಕ್ಷೆ ಇದೆ. ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠ ಮತ್ತು ಕರ್ನಾಟಕ ಕುರುಬರ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದು ಸಚಿವ ರೇವಣ್ಣ ಕಾರ್ಯಕ್ರಮದ ವಿವರ ನೀಡಿದರು.
Comments