ಶುಭಮುಹೂರ್ತದಲ್ಲಿ ಬಿಜೆಪಿಯವರ ಅಕ್ರಮದ ದಾಖಲೆ ಬಿಡುಗಡೆಗೊಳಿಸುತ್ತೇನೆ : ಡಿಕೆಶಿ
ಶುಭ ಮುಹೂರ್ತದಲ್ಲಿ ಬಿಜೆಪಿ ನಾಯಕರ ಅಕ್ರಮ, ಬಿಜೆಪಿಗೆ ಆಹ್ವಾನ ನೀಡಿದ್ದರ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕನಕೋತ್ಸವದ ಸಂದರ್ಭದಲ್ಲಿ ತಮ್ಮ ಮನೆ ಮೇಲೆ ದಾಳಿ ನಡೆದಿದೆ ಎಂಬುದನ್ನ ಒಪ್ಪಿಕೊಂಡ ಡಿ.ಕೆ. ಶಿವಕುಮಾರ್, ನನ್ನ ಮನೆ ಮೇಲೆ ಐಟಿ ದಾಳಿ ನಡೆದಿದೆ. ನಾನು ತಪ್ಪು ಮಾಡಿದ್ದೇನೆ ಎಂಬುದಕ್ಕೆ ಏನು ದಾಖಲೆ ಇದೆ ಎಂದರು.
ಬಿಜೆಪಿಯವರ ಅಕ್ರಮದ ದಾಖಲೆಗಳು ನನ್ನ ಬಳಿ ಇವೆ ಶುಭಮುಹೂರ್ತದಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ನಿನ್ನೆ ಭಾಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಇಬ್ಬರು ಸಚಿವರ ಮನೆ ಮೇಲೆ ಐಟಿ ದಾಳಿ ನಡೆದಿದೆ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾನು ನ್ಯಾಯವಾಗಿ ರಾಜಕಾರಣ ಮಾಡುತತಿದ್ದೇನೆ. ಪ್ರಧಾನಿಯವರಿಗೆ ನನ್ನ ಹೆಸರು ಸಾಧ್ಯವಾಗಿಲ್ಲ. ನನ್ನ ಹೆಸರು ಹೇಳಲಿ ನೋಡಿಕೊಳ್ಳುತ್ತೇನೆ ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ.
Comments