ಬಿಟಿಎಂ ಬಡಾವಣೆಯಲ್ಲಿ ರೆಡ್ಡಿ ಅವರನ್ನು ಮಣಿಸಲು ಜೆಡಿಎಸ್ ಮಾಸ್ಟರ್ ಪ್ಲಾನ್..!!
ಜೆಡಿಎಸ್ ಪಕ್ಷವನ್ನು ಈ ಕ್ಷೇತ್ರದಲ್ಲಿ ಅಷ್ಟಾಗಿ ಕಡೆಗಣಿಸುವಂತಿಲ್ಲ. ಬಿಬಿಎಂಪಿ ಸದಸ್ಯರಾಗಿರುವ ದೇವದಾಸ್ ಅವರು ಕೂಡ ಪರಿಣಾಮಕಾರಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಯಾರು, ಯಾರಿಗೆ ಕೈ ಜೋಡಿಸುತ್ತಾರೆ. ಯಾರು, ಯಾರ ಕೈ ಹಿಡಿಯುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ. ಬಿಜೆಪಿ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂಬ ಅಂಶವೂ ಕೂಡ ಪ್ರಮುಖವಾಗುತ್ತದೆ. ಜಯನಗರ ಕ್ಷೇತ್ರದಲ್ಲಿ ಸತತವಾಗಿ ನಾಲ್ಕು ಬಾರಿ ಗೆದ್ದು ಕ್ಷೇತ್ರ ಬದಲಾಯಿಸಿದ ಮೇಲೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ನೆಲೆ ಇಲ್ಲದಂತಾಗಿತ್ತು. ರಾಮಲಿಂಗಾರೆಡ್ಡಿ ಅವರು ಜಯನಗರ ಕ್ಷೇತ್ರದ ಮೇಲೆ ಕಣ್ಣಿಟ್ಟು ಅವರ ಪುತ್ರಿ ಸೌಮ್ಯ ರೆಡ್ಡಿ ಅವರನ್ನು ಕಣಕ್ಕಿಳಿಸಲು ಮುಂದಾಗಿ ಈಗಾಗಲೇ ಪ್ರಚಾರವನ್ನು ಶುರುವಿಟ್ಟುಕೊಂಡಿದ್ದಾರೆ.ಬಿಟಿಎಂ ಲೇಔಟ್ ಜೊತೆಗೆ ಜಯನಗರ ಕ್ಷೇತ್ರದ ಜವಾಬ್ದಾರಿ ಕೂಡ ಬಹುತೇಕ ಅವರ ಮೇಲೆಯೇ ಬೀಳಲಿದೆ. ಎರಡೂ ಕ್ಷೇತ್ರಗಳ ಹೊಣೆಗಾರಿಕೆ ಜೊತೆಗೆ ಜಯಮಾಲೆ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಕೆರಳಿಸಿದೆ.
Comments