ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ಕೊಟ್ಟ ಅಂಬರೀಷ್

ವಿಧಾನ ಸೌಧ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬರೀಶ್ 'ನನ್ನ ಆರೋಗ್ಯದ ಬಗ್ಗೆ ದೇಶಕ್ಕಲ್ಲಾ ಪ್ರಪಂಚಕ್ಕೆ ಗೊತ್ತು, ಏರ್ ಅಂಬುಲೆನ್ಸ್‌ನಲ್ಲಿ ಸಿಂಗಪುರಕ್ಕೆ ಹೋಗಿ ಚಿಕಿತ್ಸೆ ಪಡೆದು ಸರಿಯಾಗಿಯೇ ಬಂದಿದ್ದೇನೆ. ನನ್ನ ಆರೋಗ್ಯ ಚೆನ್ನಾಗೆ ಇದೆ.ಅವರಿಗೆ ಬೇಕಾದಷ್ಟು ಇವೆ ಅದನ್ನು ಮೊದಲು ಸರಿಪಡಿಸಿಕೊಳ್ಳಲಿ' ಎಂದು ತಿರುಗೇಟು ನೀಡಿದರು.
ಅಂಬರೀಷ್ ಅವರಿಗೆ ಆರೋಗ್ಯ ಸರಿಯಿಲ್ಲ ಎಂದು ಡಿಕೆಶಿ ಹೇಳಿಕೆ ನೀಡಿದ್ದರು. 'ನನ್ನ ಆರೋಗ್ಯದ ಬಗ್ಗೆ ಅವರಿಗೆ ಚಿಂತೆ ಬೇಡ. ಅವರಿಗೆ ಬೇರೆ ಬೇರೆ ಸಮಸ್ಯೆಗಳಿವೆ ಅದರ ಬಗ್ಗೆ ಯೋಚಿಸಲಿ' ಎಂದು ಹಿರಿಯ ನಟ, ಕಾಂಗ್ರೆಸ್ ಶಾಸಕ ಅಂಬರೀಷ್ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿ ಕಾರಿದ್ದಾರೆ.
Comments