ಹೆಚ್ ಡಿ ರೇವಣ್ಣ ಹಿರಿಯ ಪುತ್ರನ ಮದ್ವೆ ಡೇಟ್ ಫಿಕ್ಸ್

ಚುನಾವಣಾ ಜಂಜಾಟದ ನಡುವೆಯೇ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್. ಡಿ ದೇವೇಗೌಡರ ಮೊಮ್ಮಗನ ಮದುವೆ ಫಿಕ್ಸ್ ಆಗಿದೆ. ಅರಮನೆ ಮೈದಾನದಲ್ಲಿ ಮಾರ್ಚ್ 4 ರಂದು ಹೆಚ್ ಡಿ ರೇವಣ್ಣ ಅವರ ಹಿರಿಯ ಡಾ. ಸೂರಜ್ ರೇವಣ್ಣ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಹುಳುವಾಡಿ ರಮೇಶ್ ಅವರ ಮಗಳು ಸಾಗರಿಕಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ.
ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ಹಾಗೂ ಭವಾನಿ ದಂಪತಿಯ ಹಿರಿಯ ಪುತ್ರ ಅತೀ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮಾರ್ಚ್ 4 ರಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ ಡಾ. ಸೂರಜ್ ರೇವಣ್ಣ ಮದುವೆ ನಿಶ್ಚಯವಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿವೆ, ಈ ನಡುವೆ ದೇವೇಗೌಡರ ಮೊಮ್ಮಗನ ಮದುವೆ ಸದ್ದು ಮಾಡುವುದರಲ್ಲಿ ಅನುಮಾನವೇ ಇಲ್ಲ.
Comments