ಕುಮಾರಣ್ಣ ನ ಜೀವನಾಧಾರಿತ ಚಿತ್ರ ನಿರ್ದೇಶಿಸಲಿರುವ ಎಸ್ ನಾರಾಯಣ್



ಅರ್ಜುನ್ ಸರ್ಜಾ ನಾಯಕರಾಗಿ ನಟಿಸಬೇಕಿದ್ದ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಜೀವನಾಧಾರಿತ ಚಿತ್ರ ‘ಭೂಮಿಪುತ್ರ’ ಕೂಡ ಮುಹೂರ್ತ ಮಾಡಿಕೊಂಡು ಚಿತ್ರೀಕರಣಕ್ಕಾಗಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಅಲ್ಲದೆ ಎಸ್. ನಾರಾಯಣ್ ಸುಮ್ಮನಾಗಿಲ್ಲ. ಸದ್ಯ ಮತ್ತೆ ಹೊಸಬರನ್ನು ಕಟ್ಟಿಕೊಂಡು ಹೊಸ ಚಿತ್ರದ ಮುಹೂರ್ತಕ್ಕೆ ತಯಾರಾಗಿದ್ದಾರೆ.
ಎರಡು ವರ್ಷಗಳಲ್ಲಿ ನಾರಾಯಣ್ ಎಸ್ ಅಂಥಾ ಹೊರಟಿದ್ದೆಲ್ಲವೂ ನೋ ಅಂತ ಹಿಂತಿರುಗುವ ಹಾಗೆ ಆಗಿದೆ. ಹಾಗೆಂದು ಕನ್ನಡದ ಖ್ಯಾತ ನಟ, ನಿರ್ದೇಶಕ ಎಸ್. ನಾರಾಯಣ್ ಸುಮ್ಮನಾಗಿಲ್ಲ. ಚಿತ್ರದ ಮುಹೂರ್ತ ನಗರದ ಹನುಮಂತನಗರದಲ್ಲಿ ನಡೆದಿದ್ದು, ಈ ಬಾರಿಯಾದರೂ ಕಲಾಸಾಮ್ರಾಟ್‍ಗೆ ಅದೃಷ್ಟ ಕೈ ಹಿಡಿಯುತ್ತಾ ಕಾದು ನೋಡಬೇಕು. ಇದರ ನಡುವೆ ನಾರಾಯಣ್ ಒಂದು ಮನರಂಜನಾ ವಾಹಿನಿ ಆರಂಭಿಸಲಿದ್ದಾರೆ ಎನ್ನುವ ಸುದ್ದಿ ಬಂತಾದರೂ, ಅದು ಕೂಡ ಅಲ್ಲಿಗೇ ನಿಂತಿದೆ.
Comments