ತೆನೆ ಹೊರಲು ಸಿದ್ದರಾದ ಶ್ರೀನಾಥ್...!!
ಕಾಂಗ್ರೆಸ್ ನ ಹೈದರಾಬಾದ್ ಕರ್ನಾಟಕದ ಹಿಂದುಳಿದ ವರ್ಗದ ನಾಯಕರು ಹಿರಿಯ ಮುತ್ಸದ್ಧಿ ರಾಜಕಾರಣಿ ಹೆಚ್.ಜಿ.ರಾಮುಲು ರವರ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸಕ್ಕೆ ಮಾಜಿ ಪ್ರಧಾನಿ ಶ್ರೀ.ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ.ಎಚ್.ಡಿ.ಕುಮಾರಸ್ವಾಮಿಯವರು ಭೇಟಿ ಮಾಡಿ ಪಕ್ಷಕ್ಕೆ ಆಹ್ವಾನಿಸಿದರು. ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್.ಆರ್.ಶ್ರೀನಾಥ್,ಕರಿಯಣ್ಣ ಸಂಗಟಿ ಸೇರಿದಂತೆ 15 ಜನ ಗಂಗಾವತಿ ನಗರಸಭೆ ಸದಸ್ಯರು ಹಾಗೂ ಕಾಂಗ್ರೇಸ್ ಗೆ ಇತ್ತೀಚೆಗೆ ರಾಜಿನಾಮೆ ನೀಡಿದ್ದ ಪದಾಧಿಕಾರಿಗಳು ಉಪಸ್ಥಿತರಿದರು.
ಮಾಜಿ ಸಚಿವ ಎಚ್.ಜಿ.ರಾಮುಲು ಅವರ ಪುತ್ರ ಶ್ರೀನಾಥ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಲವಕುಶರಂತಿದ್ದು, ಜತೆಯಲ್ಲಿ ಕೆಲಸ ಮಾಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು. ನಗರದಲ್ಲಿರುವ ಮಾಜಿ ಸಚಿವ ರಾಮುಲು ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀನಾಥ್ ಸೇರ್ಪಡೆಯಾಗುತ್ತಿರುವುದು ಬಹಳ ಸಂತೋಷವಾಗಿದೆ ಎಂದರು. ಮಾಜಿ ಸಚಿವ ರಾಮುಲು ಮಾತನಾಡಿ, ಸಾಕಷ್ಟು ಜನರನ್ನು ರಾಜಕೀಯವಾಗಿ ಮುಂದೆ ತಂದಿದ್ದು, ಅವರೆಲ್ಲರೂ ನನ್ನ ಬೆನ್ನಿಗೆ ತಿವಿಯುವ ಕೆಲಸ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಹಿಂದೆ ರಾಮರಾಜ್ಯವಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಮಾಜಿ ಪ್ರಧಾನಿ ದೇವೇಗೌಡರ ಮೂಲಕ ಅಂತಹ ರಾಮರಾಜ್ಯ ಸ್ಥಾಪನೆಯಾಗಲಿ ಎಂದು ಅವರು ಹೇಳಿದರು.
Comments