ಹೊಳೆ ನರಸೀಪುರ ಸುಭಿಕ್ಷ ಕ್ಷೇತ್ರದಲ್ಲಿ ಜೆಡಿಎಸ್ ನ ಒಕ್ಕಲಿಗನೇ ಅಧಿಪತಿ..!!

ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ 1962ರಲ್ಲಿ ಕಣಕ್ಕಿಳಿದು ರಾಜಕೀಯ ಪ್ರವೇಶ ಪಡೆದ ಎಚ್. ಡಿ ದೇವೇಗೌಡ ಅವರು ಇಂದಿಗೂ ಸಕ್ರಿಯ ರಾಜಕಾರಣಿಯಾಗಿ ಉಳಿದಿದ್ದಾರೆ. ಹೊಳೆನರಸೀಪುರದಲ್ಲಿ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದು ದೇವೇಗೌಡರ ಜತೆಗೂಡಿದ್ದ ಪುಟ್ಟಸ್ವಾಮಿ ಗೌಡರು. ಅಲ್ಲದೆ 1984ರ ನಂತರ ದೇವೇಗೌಡರ ಪುತ್ರ ಎಚ್ ಡಿ ರೇವಣ್ಣ ಅವರು ಶಾಸಕರಾದರು.
ಅಪ್ಪ ಹಾಕಿಕೊಟ್ಟ ಹಾದಿಯಲ್ಲೇ ಸಾಗಿ ಹೊಳೆನರಸೀಪುರ ಕ್ಷೇತ್ರದಲ್ಲಿ ಕುಳಿತು ಹಾಸನ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಿದರು.ಕಳೆದ ವಿಧಾನಸಭೆಯಲ್ಲಿ ಅರಕಲಗೂಡು ಹಾಗೂ ಬೇಲೂರು ಬಿಟ್ಟು ಮಿಕ್ಕ ಐದು ಕ್ಷೇತ್ರಗಳು ಜೆಡಿಎಸ್ ವಶವಾಗಿತ್ತು. ಈ ಬಾರಿಯೂ ಸಹ ಜೆಡಿಎಸ್ ಗೆಲುವು ಕಾಣುವುದರಲ್ಲಿ ಎರಡು ಮಾತಿಲ್ಲವೆಂದು ಜೆಡಿಎಸ್ ಮೂಲಗಳಿಂದ ತಿಳಿದು ಬಂದಿದೆ. ಒಕ್ಕಲಿಗರ ಬೆಂಬಲ ದಲ್ಲಿರುವುದರಿಂದ ಹೊಳೆ ನರಸೀಪುರವೂ ಜೆಡಿಎಸ್ ಪಾಲಾಗುವುದರಲ್ಲಿ ಸಂಶಯವಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಚ್ ಡಿ ರೇವಣ್ಣ ಅವರು (92173 ಮತಗಳು), ಕಾಂಗ್ರೆಸ್ಸಿನ ಎಚ್ ಜಿ ಅನುಪಮ(62655) ಗಳಿಸಿದ್ದರು. 30 ಸಾವಿರ ಅಂತರದ ಮತಗಳಿಂದ ರೇವಣ್ಣ ಜಯಶಾಲಿಯಾಗಿದ್ದರು. ಈ ಬಾರಿಯೂ ಕೂಡ ರೇವಣ್ಣ ಅವರ ಗೆಲುವು ತಪ್ಪಿಸಲು ಸಾಧ್ಯವಿಲ್ಲ.
Comments