ಇಂದಿನಿಂದ ಸಿದ್ದರಾಮಯ್ಯ ಸರ್ಕಾರದ ಬಜೆಟ್ ಅಧಿವೇಶನ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೊನೆಯ ಜಂಟಿ ಅಧಿವೇಶನ ಇಂದಿನಿಂದ ಶುರುವಾಗುತ್ತಿದೆ. ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲ ವಿ.ಆರ್ ವಾಲಾ ಭಾಷಣ ಮಾಡಲಿದ್ದು, ಸರ್ಕಾರ ಭಾಷಣದಲ್ಲಿ ಬೆನ್ನು ತಟ್ಟಿಕೊಳ್ಳುವ ಕೆಲಸ ಮಾಡಲಿದೆ. ಹಾಗೆಯೇ ಕೇಂದ್ರ ಸರ್ಕಾರದ ನೀತಿಗಳು, ನೋಟ್ ಬ್ಯಾನ್, ಜಿಎಸ್ಟಿ ಎಫೆಕ್ಟ್ ಬಗ್ಗೆಯೂ ಪ್ರಸ್ತಾಪವಾಗಬಹುದು.
ಕೊನೆಯ ಅಧಿವೇಶನ ಆಗಿರುವುದರಿಂದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತಂತ್ರ. ಜೆಡಿಎಸ್ ಕೂಡ ರಾಜ್ಯಪಾಲರ ಭಾಷಣಕ್ಕೆ ಟೀಕೆ ಮಾಡಬಹುದು. ಎಲ್ಲದ್ದಕ್ಕೂ ತಿರುಗೇಟು ನೀಡಲು ಸರ್ಕಾರ ಸಜ್ಜಾಗಿದೆ. ನಿನ್ನೆ ಮೋದಿ ನೀಡಿದ್ದ ಹತ್ತು ಪರ್ಸೆಂಟ್ ಹೇಳಿಕೆ, ಮರ್ಡರ್ ಸರ್ಕಾರ, ಮಾಫಿಯಾ ಸರ್ಕಾರ ಎಂಬ ಹೇಳಿಕೆ ಮುಂದಿಟ್ಟು ಬಿಜೆಪಿಗೆ ತಿರುಗೇಟು ಕೊಡುವ ಸಾಧ್ಯತೆಗಳೂ ಇವೆ. ಹೀಗಾಗಿ ಇವತ್ತಿನ ಅಧಿವೇಶನ ಕದನವಾಗಿ ಬದಲಾಗುತ್ತಾ ಎಂದು ಕಾದು ನೋಡ್ಬೇಕು.
Comments