ಜೆಡಿಎಸ್ ಪಕ್ಷದಿಂದ ಉಚ್ಚಾಟನೆಯಾಗುವ ಬಗ್ಗೆ ಖಡಕ್ ಉತ್ತರ ಕೊಟ್ಟ ಚೈತ್ರ ಗೌಡ

ಪಕ್ಷದಿಂದ ಉಚ್ಚಾಟನೆ ಮಾಡುವ ಪ್ರಶ್ನೆಯೆ ಇಲ್ಲಾ, ನಾವು ಪಕ್ಷಕ್ಕೆ ನಿಷ್ಟಾವಂತರಾಗಿ ಜೆಡಿಎಸ್ ನ ಪದಾಧಿಕಾರಿಗಳನ್ನಾ ಆಯ್ಕೆ ಮಾಡಿ ಪಕ್ಷ ಸಂಘಟನೆಯ ಕೆಲಸ ಮಾಡುತ್ತಿದ್ದೀವಿ.ಹೀಗಿರುವಾಗ ಪಕ್ಷದಿಂದ ಉಚ್ಚಾಟನೆ ಮಾಡೋದು ಸದ್ಯಕ್ಕೆ ದೂರವಾದ ಮಾತು ಇದರಲ್ಲಿ ಯಾವುದೇ ರೀತಿಯ ಹುರುಳಿಲ್ಲಾ ಎಂದು ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಚೈತ್ರಾಗೌಡರು ತಿಳಿಸಿದ್ದಾರೆ.
ರಾಜ್ಯದಲ್ಲಿ ರೈತರ ಸಮಸ್ಯೆಗಳನ್ನು ಮನಗೊಂಡು ತಾನು ನಮ್ಮ ಹೋರಾಟವನ್ನು ರೈತರ ಪರ ಹೋರಾಟಗಳಲ್ಲಿ ತೊಡಗಿಕೊಂಡಿದ್ದಾಗ ನನ್ನ ಈ ಹೋರಾಟವನ್ನು ಗಮನಿಸಿದ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿಯವರು ಜೆಡಿಎಸ್ ಪಕ್ಷದ ಯುವ ಮಹಿಳಾ ರೈತ ದಳದ ರಾಜಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದರು.ಅಲ್ಲಿಂದ ಇಲ್ಲಿಯವರೆಗೆ ಕರ್ನಾಟಕದ ಜಿಲ್ಲೆಗಳಾದ ಮಂಡ್ಯ, ಮೈಸೂರು, ರಾಮನಗರ, ಕೋಲಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾವೇರಿ,ತುಮಕೂರು, ದಾವಣಗೆರೆ, ಕೊಡಗು, ಚಿಕ್ಕಮಗಳೂರು, ಗದಗ,ಕೊಪ್ಪಳ, ಚಾಮರಾಜನಗರ, ಉತ್ತರ ಕನ್ನಡ,ದಕ್ಷಿಣ ಕನ್ನಡ, ಉಡುಪಿ, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಹೀಗೆ ರಾಜ್ಯಾದ್ಯಂತ ಪ್ರವಾಸವನ್ನು ಮಾಡಿ ತನ್ನ ಸ್ವಂತ ಹಣದಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ.
ರೈತ ಪರವಿರುವ ಮತ್ತು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಉದ್ದೇಶ ಹೊಂದಿರುವ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿ ಮಾಡಿ ರೈತರು ನೆಮ್ಮದಿಯ ಜೀವನವನ್ನು ನಡೆಸುವಂತೆ ಮಾಡುವುದೇ ತಮ್ಮ ಧ್ಯೇಯೊಧ್ಯೇಶವನ್ನಾಗಿ ಮಾಡಿಕೊಂಡು ಅವಿರತವಾಗಿ ಪಕ್ಷಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.ಹೀಗೆ ನಾನು ರಾಜಕೀಯರಂಗಕ್ಕೆ ಪ್ರವೇಶಿಸಿದ ನಂತರ ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸದ ಪಕ್ಷ ವಿರೋಧಿಗಳಾದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಅಪಪ್ರಚಾರ ಮಾಡಿ ವದಂತಿಗಳನ್ನು ಹರಡಿ ಪಕ್ಷದಲ್ಲಿ ನನ್ನ ಇಮೇಜಿಗೆ ಡ್ಯಾಮೇಜ್ ಮಾಡುವ ಕೆಲಸಕ್ಕೆ ಕೈ ಹಾಕಿದರು. ಇದ್ಯಾವುದಕ್ಕೂ ಜಗ್ಗದೆ ಧೈರ್ಯವಾಗಿ ನಾನು ಜೆಡಿಎಸ್ ಪಕ್ಷ ತನಗೆ ಕೊಟ್ಟ ಜವಾಬ್ದಾರಿಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿಕೊಂಡು ಬರುತ್ತಿದ್ದೇನೆ.ಪಕ್ಷ ಸಂಘಟನೆಗಾಗಿ ಯಾರಿಗೂ ಕಾಯದೆ ತನ್ನದೆ ಪ್ರಯತ್ನದ ಮೂಲಕ ಯುವಕ ಯುವತಿಯರನ್ನು ಸಂಘಟಿಸುತ್ತಾ ಪದಾಧಿಕಾರಿಗಳನ್ನಾ ಆಯ್ಕೆ ಮಾಡಿ ಸಾಗುತ್ತಿರುವಾಗ ನನ್ನನ್ನು ಪಕ್ಷದಿಂದ ಉಚ್ಚಾಟಿಸುವ ಮಾತು ಕೇವಲ ಕಪೋಕಲ್ಪಿತ ಎನಿಸಿಕೊಳ್ಳುತ್ತವೆ ಎಂದು ಚೈತ್ರಗೌಡರು ತಿಳಿಸಿದ್ದಾರೆ.
Comments