ರಾಜ್ಯಕ್ಕೆ ಮೋದಿ ಆಗಮದ ಮುನ್ನವೇ ಬಿಗ್ ಶಾಕ್
ರಾಜ್ಯದಲ್ಲಿ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿರುವಂತೆ ಪಕ್ಷದಿಂದ ಪಕ್ಷಕ್ಕೆ ನಾಯಕರುಗಳು ವಲಸೆ ಹೋಗುತ್ತಿರುವುದು ಸಾಮಾನ್ಯವಾಗುತ್ತಿದೆ. ಈ ನಡುವೆ ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಪರಿವರ್ತನ ಯಾತ್ರೆಗೂ ಮುನ್ನ ಪ್ರಧಾನಿ ಮೋದಿಗೆ ಬಿಗ್ ಶಾಕಿಂಗ್ ನ್ಯೂಸ್ವಿಂದ್ ಸಿಕ್ಕಿದೆ.
ಅದೇನಪ್ಪ ಅಂದ್ರೆ ಬಿಜೆಪಿ ಶಾಸಕರು, ನಾಯಕರುಗಳು ಕಾಂಗ್ರೆಸ್ ಗೆ ವಲಸೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಸಾಲಗೆ ಬಿಎಸ್‌ಆರ್ ಪಕ್ಷದ ಶಾಸಕ ನಾಗೇಂದ್ರ ಕೂಡ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ನಡುವೆ ಕಳೆದ ವಾರವಷ್ಟೆ ಶಾಸಕ ಆನಂದ್ ಸಿಂಗ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿ ಬಿಜೆಪಿಗೆ ಬಿಗ್ ಶಾಕ್ ನೀಡಿದ್ದರು. ಈಗ ಕೂಡ್ಲಗಿ ಶಾಸಕ ನಾಗೇಂದ್ರ ಕೂಡ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗುತ್ತಿದ್ದು, ರಾಜ್ಯಕ್ಕೆ ರಾಹುಲ್ ಗಾಂಧಿಗೆ ಫೆ.10ರಂದು ಬರಲಿದ್ದು ಅಂದು ಕೂಡ್ಲಗಿ ಶಾಸಕ ನಾಗೇಂದ್ರ ಹಾಗೂ ಮಾಜಿ ಬಿಜೆಪಿ ಶಾಸಕ ವಿಜಯ್ ಶಂಕರ್ ಹಾಗೂ ಇತ್ತೀಗೆ ನಿಧನವಾಗಿರುವ ಶಾಸಕ ದಿ.ಚಿಕ್ಕಮಾದು ಅವರ ಮಗ ಅನಿಲ್ ಅವರು ಕೂಡ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಅಪರೇಷನ್ ಕಮಲದಿಂದ ಹೆಸರು ಮಾಡಿದ್ದ ಖುದ್ದು ಬಿಜೆಪಿಯ ಬುಡಕ್ಕೆ ಬೆಂಕಿ ಬಿದ್ದ ಹಾಗೇ ಆಗುತ್ತಿದ್ದು ಚುನಾವಣಾ ಹೊಸ್ತಿನಲ್ಲಿರುವ ಸಮಯದಲ್ಲಿ ತಮ್ಮ ಪಕ್ಷದ ನಾಯಕರುಗಳು ಪಕ್ಷ ಬಿಟ್ಟು ಹೋಗುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಾಮಿಸಿದೆ. ಇದಲ್ಲದೇ ನಾಳೆ ಬೆಂಗಳೂರಿಗೆ ಪರಿವರ್ತನೆಯ ರ್ಯಾಲಿ ಮೇಲೂ ಕೂಡ ಈ ವಿಷಯ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುವುದರಲ್ಲಿ ಸಂಶವಿಲ್ಲ ಅಂತ ಹೇಳಲಾಗುತ್ತಿದೆ.
Comments