'ರಾಜಯೋಗ ಭವನ' ಉದ್ಘಾಟಿಸಲಿರುವ ರಾಜ್ಯಪಾಲರು

ಹರಿಹರ ತಾಲ್ಲೂಕಿನ ಮಲೆಬೆನ್ನೂರಿನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯದಿಂದ ನಿರ್ಮಿಸಲಾಗಿರುವ ರಾಜಯೋಗ ಭವನವನ್ನು ನಾಳೆ ರಾಜ್ಯಪಾಲ ವಜುಭಾಯಿ ವಾಲಾ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಈಶ್ವರೀಯ ವಿವಿ ಸಂಚಾಲಕರಾದ ರಾಜಯೋಗಿನಿ ಮಂಜುಳಾ.ಜಿ ತಿಳಿಸಿದರು.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ನಾಳೆ ಬೆಳಗ್ಗೆ 11 ಗಂಟೆಗೆ ನೀರಾವರಿ ಇಲಾಖೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಸಿರಿಗೆರೆ ಬೃಹ್ಮಠದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು , ಈಶ್ವರೀಯ ವಿವಿ ಹುಬ್ಬಳ್ಳಿ ವಲಯದ ನಿರ್ದೇಶಕ ಡಾ.ಬಸವರಾಜ್ ರಾಜಋಷಿ ಅಧ್ಯಕ್ಷತೆ ವಹಿಸುವರು. ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ, ಸಂಸದ ಸಿದ್ದೇಶ್ವರ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪ , ಎಚ್.ಎಸ್.ಶಿವಶಂಕರ್, ಐಜಿಪಿ ಕೆ.ವಿ.ಶರತ್‍ಚಂದ್ರ, ಜಿಲ್ಲಾಧಿಕಾರಿ ರಮೇಶ್, ಎಸ್‍ಪಿ ಡಾ.ಭೀಮಾಶಂಕರ್ ಗುಳೇದ್, ಮಾಜಿ ಶಾಸಕ ಬಿ.ಪಿ.ಹರೀಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
Comments