ಸ್ಟಾರ್ ಗಿರಿಯನ್ನು ಬಿಟ್ಟ ಸ್ಯಾಂಡಲ್‍ವುಡ್ ತಾರೆಯರು..!

03 Feb 2018 12:32 PM | Politics
343 Report

ಸ್ಟಾರ್‍ಗಿರಿ ಬಿಟ್ಟು ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಬೀದಿಗಿಳಿಯಲಿದ್ದಾರೆ. ಸುಪ್ರೀಂ ಹೀರೋ ಶಶಿಕುಮಾರ್, ಸಚಿವೆ ಉಮಾಶ್ರೀ, ಹಿರಿಯ ನಟಿ ಜಯಮಾಲ, ಮಾಲಾಶ್ರೀ, ಭಾವನ, ಅಭಿನಯ ಸಾಧುಕೋಕಿಲ ಸೇರಿದಂತೆ ಹಲವಾರು ನಟ ನಟಿಯರು ರಾಜ್ಯದ ನಾನಾ ಭಾಗಗಳಲ್ಲಿ ಬೀದಿ ನಾಟಕ ಮಾಡಲಿದ್ದಾರೆ.

ಇವರೆಲ್ಲಾ ಸ್ಯಾಂಡಲ್‍ವುಡ್ ಬಿಟ್ಟು ಬೀದಿಗಿಳಿಯಲು ಕಾರಣ ಕಾಂಗ್ರೆಸ್. ಜನಮತಕ್ಕಾಗಿ ಸ್ಯಾಂಡಲ್‍ವುಡ್ ಸ್ಟಾರ್‍ಗಳಿಂದಲೇ ಬೀದಿ ನಾಟಕವಾಡಿಸಲು ಕೆಪಿಸಿಸಿ ಮುಂದಾಗಿದೆ. ಸ್ಟಾರ್ ಪ್ರಚಾರಕರು ಕೇವಲ ರೋಡ್ ಶೋಗಷ್ಟೇ ಸೀಮಿತವಲ್ಲ. ಬೀದಿ ಬೀದಿಯಲ್ಲಿ ಸರ್ಕಾರದ ಸಾಧನೆಯನ್ನ ತಮ್ಮ ಆ್ಯಕ್ಟಿಂಗ್ ಮೂಲಕ ತೋರಿಸಬೇಕಿದೆ. ಕೋಟಿಕೋಟಿ ಸಂಭಾವನೆ, ಮೇಕಪ್, ಕಾಸ್ಟ್ಯೂಮ್ ಎಲ್ಲಾ ಬಿಟ್ಟು ರಸ್ತೆಯಲ್ಲಿ ಬೆವರಿಳಿಸಬೇಕಿದೆ.

Edited By

Shruthi G

Reported By

Madhu shree

Comments