ಮುಂಬರುವ ಚುನಾವಣೆಯಲ್ಲಿ ಮಂಡ್ಯದಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತ : ಅಂಬರೀಷ್

ಯಾರೇ ಸ್ಪರ್ಧಿಸಿದ್ರೂ ಮಂಡ್ಯದಲ್ಲಿ ನಾನು ಸ್ಪರ್ಧೆ ಮಾಡುವೆ. ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ನಿರ್ಧರಿಸಲಿದೆ, ಯಾರಾದರೂ ಸ್ಪರ್ಧೆ ಮಾಡಲಿ. ನಾನಂತೂ ಚುನಾವಣೆಯಲ್ಲಿ ಸ್ಪರ್ಧಿಸುವೆ ಮಾಜಿ ಸಚಿವ ಅಂಬರೀಶ್ ಅವರು ಗುಡುಗಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಮಂಡ್ಯದಲ್ಲಿ ನಾನು ಸ್ಪರ್ಧೆ ಮಾಡುವುದು ನಿಶ್ಚಿತ. ರಮ್ಯಾ ಸ್ಪರ್ಧಿಸಿದ್ರೂ ನಾನು ಸ್ಪರ್ಧಿಸುತ್ತೇನೆ. ಯಾರೇ ಸ್ಪರ್ಧಿಸಿದರೂ ನಾನು ಸ್ಪರ್ಧಿಸುತ್ತೇನೆ. ಮಂಡ್ಯದಲ್ಲಿ ನಾನೇ ಬಾಸು, ನಾನೇ ಅಭ್ಯರ್ಥಿ ಎಂದು ಮಾಜಿ ಸಚಿವ ಅಂಬರೀಶ್ ಅವರು ಗುಡುಗಿದ್ದಾರೆ. ನನ್ನ ಆರೋಗ್ಯದ ಬಗ್ಗೆ ಕೆಲವರು ಸುಮ್ಮನೆ ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬುದು ಗೊತ್ತಿದೆ. ಮುಂದೆ ಅವರಿಗೂ ಅದೇ ರೀತಿ ಹುಷಾರಿರುವುದಿಲ್ಲ ಎಂಬುದನ್ನು ಮರೆತುಬಿಟ್ಟಿದ್ದಾರೆ ಎಂದರು. ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತೇನೆ. ನಾನು ಆರೋಗ್ಯವಾಗಿದ್ದೇನೆ ಎಂದು ಅಂಬರೀಷ್ ಅವರು ಮದ್ದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
Comments