ನಾಯಕ ಕೊಹ್ಲಿ ವಿರುದ್ಧ ಅಸಮಾಧಾನಗೊಂಡ ಶಿಖರ್ ಧವನ್

ಬೇಡದ ರನ್ ಗೆ ಓಡಿ ಔಟಾಗಿದ್ದಕ್ಕೆ ಶಿಖರ್ ಧವನ್ ಮೈದಾನದಲ್ಲೇ ವಿರಾಟ್ ಕೊಹ್ಲಿ ವಿರುದ್ಧ ಅಸಹನೆ ವ್ಯಕ್ತಪಡಿಸಿದರು. ಇನ್ನು ಧವನ್ ನಾಯಕ ಕೊಹ್ಲಿ ವಿರುದ್ಧ ಅಸಹನೆ ತೋರಿರುವುದು ದೃಶ್ಯಗಳಲ್ಲೂ ಸೆರೆಯಾಗಿದೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿದೆ.
ಆದರೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಮೈದಾನದಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು. ಆಫ್ರಿಕಾ ನೀಡಿದ ಸ್ಪರ್ಧಾತ್ಮಕ ಗುರಿ ಬೆನ್ನಟ್ಟುತ್ತಿದ್ದ ಭಾರತ ಪರ ಶಿಖರ್ ಧವನ್ 29 ಎಸೆತಗಳಲ್ಲಿ 35 ರನ್ ಪೇರಿಸಿ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದರು. ಪಂದ್ಯದ 13ನೇ ಓವರ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಕಣದಲ್ಲಿದ್ದರು. ಕ್ರಿಸ್ ಮೋರಿಸ್ ಎಸೆತವನ್ನು ಎದುರಿಸಿದ ಶಿಖರ್ ಧವನ್ ಚೆಂಡನ್ನು ಅಲ್ಲೇ ಕುಟ್ಟಿದ್ದರು. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಕೊಹ್ಲಿ ಸಿಂಗಲ್ ರನ್ ತೆಗೆದುಕೊಳ್ಳಲು ಮುಂದಾದರು. ಆದರೆ ಶಿಖರ್ ಧವನ್ ಕ್ರಿಸ್ ಮುಟ್ಟುವ ವೇಳೆ ಮಾರ್ಕ್ರಾಮ್ ಎಸೆದ ಚೆಂಡು ವಿಕೆಟ್ ಗೆ ಬಡಿದಿತ್ತು. ಅಂಪೈರ್ ಸಹ ಔಟ್ ಎಂದು ತೀರ್ಪು ನೀಡಿದರು.
Comments