ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕಿಳಿಯಲು ಜೆಡಿಎಸ್ ಅಭ್ಯರ್ಥಿ ಫಿಕ್ಸ್..!!

ಕರ್ನಾಟಕ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಭರ್ಜರಿ ತಯಾರಿ ನಡೆಸುತ್ತಿವೆ. ಅದೇ ರೀತಿ ಜೆಡಿಎಸ್ ವಿಪಕ್ಷಗಳಿಗೆ ಸೆಡ್ಡು ಹೊಡೆಯಲು ತಯಾರಿ ನಡೆಸುತ್ತಿದೆ. ಚುನಾವಣೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಜವರಾಯಿಗೌಡ ಅವರು ಸ್ಪರ್ಧಿಸಿದ್ದರು.ಮೂರನೆ ಅವಧಿಯಲ್ಲೂ ಜವರಾಯಿಗೌಡ ಅವರೇ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರವನ್ನು ಜೆಡಿಎಸ್ ತಮ್ಮ ವಶಕ್ಕೆ ಪಡೆದುಕೊಳ್ಳಲು ಕಸರತ್ತು ನಡೆಸುತ್ತಿದೆ. ಬಿಬಿಎಂಪಿ ಮಾಜಿ ಸದಸ್ಯ ಹನುಮಂತೇಗೌಡ ಅವರು ಮತ್ತೆ ಜೆಡಿಎಸ್‍ಗೆ ಹಿಂತಿರುಗಲಿದ್ದಾರೆಎಂಬ ಸುದ್ದಿ ಮೂಲಗಳಿಂದ ತಿಳಿದು ಬಂದಿದೆ. ಇದು ಜೆಡಿಎಸ್‍ಗೆ ಪ್ಲಸ್ ಪಾಯಂಟ್ ಆಗಲಿದೆ. ಜವರಾಯಿಗೌಡ ಅವರ ಗೆಲ್ಲುವಿಗೆ ಮತ್ತಷ್ಟು ಬಲವಾಗಲಿದೆ. ಈ ಬಾರಿ ಜೆಡಿಎಸ್‍ಗೆ ಗೆಲ್ಲುವು ಖಚಿತ.ಈ ಬಾರಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ವರ್ಚಸ್ಸಿನಿಂದ ಜೆಡಿಎಸ್‍ಗೆ ಗೆಲ್ಲುವು ಒಲಿದು ಬರಲಿದೆ.
Comments