ರೈತರೇನು ಭಯೋತ್ಪಾದಕರೆ, ಸರ್ಕಾರಕ್ಕೆ ಎಚ್ ಡಿಕೆ ಪ್ರಶ್ನೆ

ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಅವರು, ಸರ್ಕಾರ ಅಲ್ಪಸಂಖ್ಯಾತರ ಮೇಲಿನ ಪ್ರಕರಣ ವಾಪಸ್ ಪಡೆಯುವ ಉದ್ದೇಶದಿಂದ ವರದಿ ಕೇಳಿತ್ತು. ನಂತರ ಬಿಜೆಪಿ ವಿರೋಧದಿಂದ ಎಲ್ಲ ಪ್ರಕರಣಗಳ ಕುರಿತು ಮಾಹಿತಿ ಕೇಳುತ್ತಿದೆ. ಈ ಹಿಂದಿನಿಂದಲೂ ರೈತರು ವಿವಿಧ ಬೇಡಿಕೆ ಈಡೇರಿಕೆಗಾಗಿ ಹೋರಾಟ ಮಾಡಿದ್ದಾರೆ. ಹೋರಾಟ ಗಾರರ ಮೇಲೆ ಹಲವು ಪ್ರಕರಣ ದಾಖಲಿಸಿ ನಿತ್ಯ ಪೊಲೀಸ್ ಠಾಣೆ, ನ್ಯಾಯಾಲಯಗಳಿಗೆ ಅಲೆದಾಡುವಂತೆ ಮಾಡಿದೆ.
ಕೂಡಗಿ ಎನ್‌ಟಿಪಿಸಿ ಹಾಗೂ ಮಹದಾಯಿ ಯೋಜನೆ ಹೋರಾಟ ಸೇರಿದಂತೆ ಇತರ ಪ್ರಕರಣ ಹಿಂಪಡೆಯಲು ಹಿಂದೇಟು ಹಾಕುತ್ತಿರುವುದಕ್ಕೆ ರೈತರೇನು ಭಯೋತ್ಪಾದಕರೆ ಅಥವಾ ಉಗ್ರಗಾಮಿಗಳೇ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಈಗ ದಿಢೀರ್ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಬರಲು ಕಾರಣ ಏನು? ಮುಗಟಛಿರ ಮೇಲೆ ದಾಖಲಾ ಗಿರುವ ಪ್ರಕರಣ ಹಿಂಪಡೆಯಲು ಸರ್ಕಾರ ಮುಂದಾಗ ಬೇಕು ಎಂದರು. ನ್ಯಾ.ಬಚಾವತ್ ಆಯೋಗ 1975-76 ರಲ್ಲಿಯೇ ನೀಡಿರುವ ವರದಿ ಪ್ರಕಾರ 84 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರು.
Comments