ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಮತ್ತೊಬ್ಬ ನಾಯಕ ನಟ

ಚುನಾವಣೆ ಸಮೀಪಿಸುತ್ತಿದಂತೆ ಸ್ಟಾರ್ ನಟ ರ ರಾಜಿಕೀಯ ಸೇರ್ಪಡೆಗಳು ಹೆಚ್ಚಾಗುತ್ತಿವೆ. ಅಲ್ಲದೆ ರಾಜಕೀಯ ಪಕ್ಷಗಳ ಪರ ಪ್ರಚಾರಗಳು ಸಹ ನಡೆಯುತ್ತಲೇ ಇವೆ. ಅದೇ ರೀತಿ ಸ್ಯಾಂಡಲ್ ವುಡ್ ನ ಶಿಷ್ಯ ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ನಟ ದೀಪಕ್ ರಾಜಕೀಯ ಸೇರುವ ಆಸೆಯನ್ನ ವ್ಯಕ್ತ ಪಡಿಸಿದ್ದಾರೆ.
ದರ್ಶನ್, ಸುದೀಪ್, ಶಶಿಕುಮಾರ್, ರಂಗಾಯಣರಘು, ಉಪೇಂದ್ರ, ರೂಪ ಐಯ್ಯರ್, ಇವರುಗಳ ನಂತರ ಈಗ ಸ್ಯಾಂಡಲ್ ವುಡ್ ನ ಮತ್ತೊರ್ವ ನಟ ರಾಜಕೀಯ ಪಕ್ಷ ಸೇರಲು ಸಿದ್ದತೆ ಮಾಡಿಕೊಂಡಿದ್ದಾರೆ. ಹೌದು ತಾವು ಕಾಂಗ್ರೆಸ್ ಪಕ್ಷ ಸೇರುವುದಾಗಿ ದೀಪಕ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ರಾಜಕೀಯಕ್ಕೆ ಬರಲು ಮುಂದಾಗಿರುವ ದೀಪಕ್ ಅವರ ನಿರ್ಧಾರಕ್ಕೆ ಕೆಲ ಅಭಿಮಾನಿಗಳು ವಿರೋಧ ವ್ಯಕ್ತ ಪಡಿಸಿದರೆ ಇನ್ನೂ ಕೆಲವರು ಶುಭಾಶಯ ಕೋರಿದ್ದಾರೆ. ಕಾಂಗ್ರೆಸ್ ಮೂಲಕ ಚುನಾವಣಾ ಕಣಕ್ಕೆ ಬರಲು ನಿರ್ಧರಿಸಿರುವ ದೀಪಕ್ ಯಾವಾಗ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಎನ್ನುವ ಬಗ್ಗೆ ಮಾತ್ರ ಸುಳಿವು ನೀಡಿಲ್ಲ. ಒಟ್ಟಾರೆ ಈ ಭಾರಿಯ ಚುನಾವಣೆಯಲ್ಲಿ ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ಕಲಾವಿದರು ಕಾಣಿಸಿಕೊಳ್ಳುವುದು ಖಚಿತವಾಗುತ್ತಿದೆ.
Comments