ಸಿದ್ಧರಾಮಯ್ಯ ಬಿಜೆಪಿ ಸೇರಿದರು ಅಚ್ಚರಿಯೇನಿಲ್ಲ : ಎಚ್ ಡಿಕೆ ಅಪಹಾಸ್ಯ

02 Feb 2018 10:35 AM | Politics
318 Report

ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ, ಎಚ್.ಡಿ.ಕುಮಾರಸ್ವಾಮಿಯವರು ನನಗೆ ಸಂಶಯವಿದೆ. ಇದನ್ನು ನಾನು ತಮಾಶೆಗೆ ಹೇಳುತ್ತಿಲ್ಲ. ಸಿದ್ದರಾಮಯ್ಯ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಟೀಕಿಸಿಸಿದರು. ಸಿಎಂ ನಡುವಳಿಕೆ ನೋಡಿದರೆ ನನಗೆ ಹಾಗೆ ಅನಿಸುತ್ತದೆ. 40, 50 ಡಿವೈಡ್ ಮಾಡ್ಕೊಂಡು ಅವರೇ ಬಿಜೆಪಿ ಜತೆಗೆ ಸೇರಿ ಸರ್ಕಾರ ಮಾಡುವ ವಾತಾವರಣ ನಿರ್ಮಾಣ ಮಾಡಿದರೂ ಆಶ್ಚರ್ಯ ಪಡಬೇಡಿ ಎಂದು ಎಚ್ ಡಿಕೆ ಅಪಹಾಸ್ಯ ಮಾಡಿದ್ದಾರೆ.

ಕಾಂಗ್ರೆಸ್​ಗೆ ವೋಟ್ ಹಾಕುವ ಮೊದಲು ಅಲ್ಪಸಂಖ್ಯಾತರು ಸೂಕ್ಷ್ಮವಾಗಿ ಗಮನಿಸುವುದು ಸೂಕ್ತ ಎಂದರು. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಹೇಳಿದವರಿಗೆ ಟಿಕೇಟ್ ಕೊಡ್ತಾರೆ. ಸಿಎಂ ಅವರನ್ನು ಬಿಟ್ಟು ಹೈ ಕಮಾಂಡ್​ಗೆ ಟಿಕೇಟ್ ನೀಡಲು ಆಗಲ್ಲ. ಈ ವೇಳೆ ಅವರ ಅಭಿಮಾನಿಗಳಿಗೆ ಜಾಸ್ತಿ ಟಿಕೇಟ್ ಕೊಡಿಸುತ್ತಾರೆ. ಅತಂತ್ರ ಪರಿಸ್ಥಿತಿ ಸೃಷ್ಟಿಯಾದರೆ ಸಿದ್ದರಾಮಯ್ಯ ಮೊದಲು ನರೇಂದ್ರ ಮೋದಿ ಬಳಿ ಹೋಗಿ ನಿಲ್ಲುತ್ತಾರೆ ಎಂದು ಜರಿದರು.

Edited By

Shruthi G

Reported By

Madhu shree

Comments