ಆಫ್ರಿಕಾವನ್ನು 6 ವಿಕೆಟ್ ಗಳಿಂದ ಬಗ್ಗುಬಡಿದ ಭಾರತ ತಂಡ
ಡರ್ಬನ್ನಲ್ಲಿ ನಡೆದ 6 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 6 ವಿಕೆಟ್ಗಳಿಂದ ಬಗ್ಗುಬಡಿದ ಭಾರತ ತಂಡ ಕಿಂಗ್ಸ್ ಮೇಡ್ ಮೈದಾನದಲ್ಲಿ ಆತಿಥೇಯ ತಂಡದ ವಿರುದ್ಧ ಮೊಟ್ಟಮೊದಲ ಗೆಲುವು ದಾಖಲಿಸಿತು. ದಕ್ಷಿಣ ಆಫ್ರಿಕಾ ವಿರುದ್ಧ ಈ ಮೈದಾನದಲ್ಲಿ ಆಡಿದ ಹಿಂದಿನ ಏಳು ಪಂದ್ಯಗಳ ಪೈಕಿ 6ರಲ್ಲಿ ಸೋಲು ದಾಖಲಾಗಿದ್ದರೆ, ಇನ್ನೊಂದು ಪಂದ್ಯ ರದ್ದಾಗಿತ್ತು.
ಪಂದ್ಯ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿ ಕೊಂಡಿತು. ಕುಲ ದೀಪ್ ಯಾದವ್ (34ಕ್ಕೆ 3) ಹಾಗೂ ಯಜುವೇಂದ್ರ ಚಾಹಲ್ರ (45ಕ್ಕೆ 2) ಸ್ಪಿನ್ ದಾಳಿಗೆ ಆರಂಭದಲ್ಲಿ ಆತಂಕಕ್ಕೆ ಈಡಾಗಿದ್ದ ಆತಿಥೇಯ ತಂಡ, ನಾಯಕ ಫಾಫ್ ಡು ಪ್ಲೆಸಿಸ್ (120ರನ್, 112 ಎಸೆತ, 11 ಬೌಂಡರಿ, 2 ಸಿಕ್ಸರ್) ಬಾರಿಸಿದ ಶತಕದ ಬಲದಿಂದ 8 ವಿಕೆಟ್ಗೆ 269 ರನ್ ಬಾರಿಸಿತು. ಇದಕ್ಕೂತ್ತರವಾಗಿ ಚೆಸಿಂಗ ಮಾಸ್ಟರ್ ನಾಯಕ ವಿರಾಟ್ ಕೊಹ್ಲಿ (112 ರನ್, 119 ಎಸೆತ, 10 ಬೌಂಡರಿ) ಹಾಗೂ ಅಜಿಂಕ್ಯ ರಹಾನೆ (79 ರನ್, 86 ಎಸೆತ, 5 ಬೌಂಡರಿ, 2 ಸಿಕ್ಸರ್) ಮೂಲಕ ಯಶಸ್ವಿ ಚೇಸಿಂಗ್ ಮಾಡಿದ ಭಾರತ 45.3 ಓವರ್ಗಳಲ್ಲಿ 4 ವಿಕೆಟ್ಗೆ 270 ರನ್ ಬಾರಿಸಿ ಗೆಲುವು ಕಂಡಿತು. ಆ ಮೂಲಕ ಸರಣಿಯಲ್ಲಿ 1-0 ಮುನ್ನಡೆಗೇರಿದ ಭಾರತ, ದಕ್ಷಿಣ ಆಫ್ರಿಕಾದ ಸತತ 17 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು.
Comments