ಕೇಂದ್ರದ ಬಜೆಟ್ ನಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ವೇತನ ಹೆಚ್ಚಳ!
2018-19 ನೇ ಸಾಲಿನ ಬಜೆಟ್ ಮಂಡನೆ ಮಾಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರುಗಳ ಸಂಬಳವನ್ನು ಏರಿಕೆ ಮಾಡಿದ್ದಾರೆ.ರಾಷ್ಟ್ರಪತಿಗಳ ವೇತನವನ್ನು ಪ್ರತಿ ತಿಂಗಳಿಗೆ 5 ಲಕ್ಷ ರೂಪಾಯಿ, ಉಪರಾಷ್ಟ್ರಪತಿಗಳ ವೇತನವನ್ನು 4 ಲಕ್ಷ ರೂಪಾಯಿ, ರಾಜ್ಯಪಾಲರುಗಳ ವೇತನವನ್ನು 3.5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಇದೇ ವೇಳೆ ಸಂಶದರ ವೇತನವನ್ನು ಪ್ರತಿ 5 ವರ್ಷಕ್ಕೊಮ್ಮೆ ಹಣದುಬ್ಬರವನ್ನು ಆಧರಿಸಿ ವೇತನ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಅರುಣ್ ಜೇಟ್ಲಿ ಸದನಕ್ಕೆ ತಿಳಿಸಿದ್ದಾರೆ.
Comments