ಸಕಲೇಶಪುರ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ನಡುಕ ಹುಟ್ಟಿಸಿರುವ ಜೆಡಿಎಸ್..!!

ಹಾಸನ ಜಿಲ್ಲೆಯ ತಾಲೂಕು ಕೇಂದ್ರ ಸಕಲೇಶಪುರ ವಿಧಾನಸಭಾ ಕ್ಷೇತ್ರ ಪಶ್ಚಿಮ ಘಟ್ಟದ ತಪ್ಪಲಿನ ಮಲೆನಾಡು ಪ್ರದೇಶವಾಗಿದ್ದು, ಸಮಶೀತೋಷ್ಣ ಹವೆಯನ್ನು ಹೊಂದಿರುತ್ತದೆ. ಗಿರಿಧಾಮ, ಜೈವಿಕ ವೈವಿಧ್ಯತೆಗಳ ತಾಣವಾಗಿರುವ ಸಕಲೇಶಪುರ, ಪ್ರಮುಖ ಕೃಷಿ ಪ್ರಧಾನ ಕೇಂದ್ರ ಕೂಡಾ.
ಹೇಮಾವತಿ ನದಿ ತೀರದ ಈ ಕ್ಷೇತ್ರದಲ್ಲಿ ಒಕ್ಕಲಿಗರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಮತ, ಪಂಥದವರು ನೆಲೆಸಿದ್ದಾರೆ. ಮೀಸಲು ಕ್ಷೇತ್ರವಾಗಿರುವ ಸಕಲೇಶಪುರದಲ್ಲಿ ಒಕ್ಕಲಿಗ, ಲಿಂಗಾಯತ ಮತಗಳು ಪ್ರಮುಖ ಪಾತ್ರವಹಿಸಲಿವೆ.ಬೆಂಗಳೂರು- ಮಂಗಳೂರಿನ ಹೆದ್ದಾರಿಯಲ್ಲಿರುವ ಸಕಲೇಶಪುರ, ಸರಕು ಸಾಗಣೆದಾರರಿಗೆ ಅಗತ್ಯವಾದ ತಂಗುದಾಣ. ಕಳಪೆ ರಸ್ತೆ ಇಲ್ಲಿನ ಬಹುದೊಡ್ಡ ಸಮಸ್ಯೆ, ಬಿಸಿಲೆ ಅರಣ್ಯ ಧಾಮಕ್ಕೆ ಹೆಚ್ಚಿನ ಸುರಕ್ಷತೆ, ಪ್ರವಾಸಿಗರಿಗೆ ಹೆಚ್ಚಿನ ಮಾರ್ಗದರ್ಶನ ನೀಡುವ ಸೌಲಭ್ಯಗಳಲ್ಲಿ ಒಂದು ಕಡೆ ಶ್ರೀಮಂತ ನೈಸರ್ಗಿಕ ಪರಿಸರ ಹಾಗೂ ಎಸ್ಟೇಟುಗಳು ಮತ್ತೊಂದೆಡೆ ಕಾಡು, ಗುಡಿಸಲುಗಳನ್ನು ಹೊಂದಿದ್ದು ಸಮತೋಲನ ಕಾಯ್ದುಕೊಂಡಿದೆ. ಮೀಸಲು ಕ್ಷೇತ್ರವಾಗಿರುವ ಸಕಲೇಶಪುರದಲ್ಲಿ ಒಕ್ಕಲಿಗ, ಲಿಂಗಾಯತ ಮತಗಳು ಪ್ರಮುಖ ಪಾತ್ರವಹಿಸಲಿವೆ. ಹೀಗಾಗಿ ಜೆಡಿಎಸ್ ಗೆ ಇದು ಪ್ಲಸ್ ಪಾಯಂಟ್ ಆಗಲಿದೆ.ಕಳೆದ ಬಾರಿ ಜೆಡಿಎಸ್ ನ ಎಚ್.ಕೆ.ಕುಮಾರಸ್ವಾಮಿ ಅವರು 63,602 ಮತಗಳನ್ನು ಪಡೆದು ಕಾಂಗ್ರೆಸ್ಸಿನ ಡಿ ಮಲ್ಲೇಶ್ (57,110) ಅವರನ್ನು ಸೋಲಿಸಿ, ಜಯಭೇರಿ ಬಾರಿಸಿದ್ದರು.ಈ ಬಾರಿಯೂ ರಾಷ್ಟ್ರೀಯ ಪಕ್ಷಗಳನ್ನು ಹಿಂದಿಕ್ಕಲು ಜೆಡಿಎಸ್ ತನ್ನದೇ ಆದ ರಣತಂತ್ರ ರೂಪಿಸುತ್ತಿದೆ.ಅಭ್ಯರ್ಥಿಯನ್ನು ಅಖಾಡಕ್ಕಿಸಲು ಸಜ್ಜಾಗಿದೆ.ಈ ಬಾರಿಯೂ ಜೆಡಿಎಸ್ ಸಕಲೇಶಪುರ ಕ್ಷೇತ್ರವನ್ನು ತಮ್ಮ ವಶಕೆ ಪಡೆಯುವುದರಲ್ಲಿ ಎರಡು ಮಾತಿಲ್ಲ.
Comments