ಲೋಕಸಭೆಯಲ್ಲಿ ಅರುಣ್ ಜೇಟ್ಲಿ ಬಜೆಟ್ ಮಂಡನೆ ಆರಂಭ

ಲೋಕಸಭೆ ಕಲಾಪ ಆರಂಭವಾಗಿದೆ. ಆರಂಭದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಂಪ್ರದಾಯದ ಪ್ರಕಾರ ಮೃತರಿಗೆ ಸಂತಾಪ ಸೂಚಿಸಲು ಕಲಾಪವನ್ನು ರದ್ದುಗೊಳಿಸಿ ಒಂದು ದಿನ ರಜೆ ಘೋಷಣೆ ಮಾಡಬೇಕಿತ್ತು. ಆದ್ರೆ ಬಜೆಟ್ ಅಧಿವೇಶನವಾಗಿದ್ದರಿಂದ ಕಲಾಪ ಮುಂದುವರೆಸುವುದಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ರು.
ನಂತ್ರ ಇಂಗ್ಲೀಷ್ ನಲ್ಲಿಯೇ ಭಾಷಣ ಶುರು ಮಾಡಿದ ಅರುಣ್ ಜೇಟ್ಲಿ ಮಧ್ಯೆ ಹಿಂದಿಯಲ್ಲಿ ಬಜೆಟ್ ಮಂಡನೆ ಶುರುಮಾಡಿದ್ದಾರೆ. ಕೇಂದ್ರ ಸರ್ಕಾರದ ಸಾಧನೆಗಳನ್ನು ಕಲಾಪದ ಮುಂದಿಡುತ್ತಿದ್ದಾರೆ. ಬಡತನ ನಿರ್ಮೂಲನಗೆ ಗಮನ ನೀಡಿದ್ದೇವೆ. ನಾಲ್ಕು ವರ್ಷಗಳ ಹಿಂದೆ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸುವತ್ತ ಹೆಜ್ಜೆಯಿಟ್ಟಿದ್ದೇವೆ ಎಂದು ಜೇಟ್ಲಿ ಹೇಳಿದ್ದಾರೆ. ನಾಲ್ಕು ವರ್ಷಗಳಿಂದ ಸ್ವಚ್ಛ ಆಡಳಿತ ನೀಡಿದ್ದೇವೆ. ಆರ್ಥಿಕ ಸುಧಾರಣೆಗೆ ಮಹತ್ವ ನೀಡಿದ್ದೇವೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
*8ಸಾವಿರ ಬಜೆಟ್ ಪ್ರತಿ ಮುದ್ರಿಸಿರುವ ಕೇಂದ್ರ ಸರಕಾರ, 2500 ಬಜೆಟ್ ಪ್ರತಿ ಸಂಸತ್ ಭವನಕ್ಕೆ ತಲುಪಿಸಲಾಗಿದೆ.
*ಸಂಸತ್ ಭವನಕ್ಕೆ ಆಗಮಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ
*ಸಂಸತ್ ಭವನ ತಲುಪಿದ 2018-19ನೇ ಸಾಲಿನ ಬಜೆಟ್ ಪ್ರತಿಗಳು
*ಕೇಂದ್ರ ಸರಕಾರ ಮಂಡಿಸುತ್ತಿರುವ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಇದಾಗಿದೆ
*2018-2019ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ
Comments