ಈ ಬಾರಿಯೂ ಗೊಮ್ಮಟ ನಗರಿಯಲ್ಲಿ ತೆನೆ ಹೊತ್ತ ಮಹಿಳೆಗೆ ಜಯ..!!

ಐತಿಹಾಸಿಕ ನಗರಿ ಶ್ರವಣ ಬೆಳಗೊಳ ಪ್ರಮುಖ ಜೈನ ಧಾರ್ಮಿಕ ಕೇಂದ್ರ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಒಂದು ಹೋಬಳಿಯಾಗಿದ್ದರೂ ವಿಧಾನಸಭಾ ಕ್ಷೇತ್ರವಾಗಿ ಬೆಳೆದಿದೆ.ಇಲ್ಲಿನ ವಿಂಧ್ಯಗಿರಿಯಲ್ಲಿ ಚಾವುಂಡರಾಯನಿಂದ ಸ್ಥಾಪಿಸಲಾಗಿರುವ ಗೊಮ್ಮಟ ಮೂರ್ತಿಯ ಏಕಶಿಲಾ ವಿಗ್ರಹ ವಿಶ್ವಪ್ರಸಿದ್ಧಿ.
ಈ ಬಾರಿ ಮಹಾಮಸ್ತಕಾಭಿಷೇಕಕ್ಕೆ ಸಜ್ಜಾಗುತ್ತಿರುವ ಈ ನಗರ ಪ್ರಮುಖ ವಿದ್ಯಾಕೇಂದ್ರವೂ ಹೌದು.ಮಹಾಮಸ್ತಕಾಭಿಷೇಕ ಆಚರಣೆ ಸಿದ್ಧತೆಯಲ್ಲಿ ಉಭಯ ಪಕ್ಷಗಳು ಪಾಲ್ಗೊಳ್ಳುತ್ತಿವೆ. ಜೈನರ ಮಠದಿಂದ ಹಲವು ಶೈಕ್ಷಣಕ ಸಂಸ್ಥೆಗಳನ್ನು ನಡೆಸಲಾಗುತ್ತಿದ್ದು, ಇಂಜಿನಿಯರಿಂಗ್, ಪಾಲಿಟೆಕ್ನಿಕ್, ಪದವಿ ಕಾಲೇಜುಗಳಿವೆ. ಜೈನ, ಶ್ರೀವೈಷ್ಣವ ಸಂಶೋಧನಾ ಕೇಂದ್ರಗಳಿವೆ.ಹೆದ್ದಾರಿಗೆ ಹತ್ತಿರವಿದ್ದರೂ ರಾಜಧಾನಿಯಿಂದ ನೇರ ಬಸ್ ಸಂಪರ್ಕವಿಲ್ಲ. ಮಸ್ತಕಾಭಿಶೇಕದ ಹಿನ್ನಲೆಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಭರದಿಂದ ಸಾಗಿದೆ. ಇಲ್ಲಿ ಊಟ ವಸತಿ ಕೇಂದ್ರಗಳಿದ್ದರೂ ಉತ್ತಮ ಗುಣಮಟ್ಟದಲ್ಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ, ಜೈನ ಮತದಾರರನ್ನು ಒಲಿಸಿಕೊಂಡು ಜೆಡಿಎಸ್ ನ ಸಿ.ಎನ್.ಬಾಲಕೃಷ್ಣ ಅವರು (87,185) ಕಾಂಗ್ರೆಸ್ಸಿನ ಸಿ. ಎನ್ ಪುಟ್ಟೇಗೌಡ(63041) ವಿರುದ್ಧ 20 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು.ಆದರೆ, ಈ ಬಾರಿಯೂ ತೆನೆ ಹೊತ್ತ ಮಹಿಳೆಯ ಪಕ್ಷಕ್ಕೆ ಗೊಮ್ಮಟನ ಕೃಪೆ ಸಿಗುವ ಲಕ್ಷಣಗಳಿವೆ.ಕಾಂಗ್ರೆಸ್ ಅನ್ನು ಹಿಮ್ಮೆಟ್ಟಿಸಲು ಜೆಡಿಎಸ್ ತನ್ನದೇ ಆದ ರೀತಿಯಲ್ಲಿ ತಂತ್ರವನ್ನು ರೂಪಿಸಿದೆ. ಈ ಬಾರಿ ಗೊಮ್ಮಟ ನಗರಿಯಲ್ಲಿ ಗೆಲುವುದರಲ್ಲಿ ಎರಡು ಮಾತಿಲ್ಲ,ಏಕೆಂದರೆ ಜೆಡಿಎಸ್ ಈ ಕ್ಷೇತ್ರದಲ್ಲಿ ಪ್ರಬಲ ಸ್ಥಾನಗಳನ್ನು ಹೊಂದಿದೆ. ಅಲ್ಲದೆ ಈ ಕ್ಷೇತ್ರದಲ್ಲಿ ಜೆಡಿಎಸ್ ವರ್ಚಸು ಇರುವುದರಿಂದ ಗೆಲ್ಲುವುದು ಖಚಿತವೆಂದೇ ಹೇಳಬಹುದು.
Comments