ಕಾಂಗ್ರೆಸ್ ಗೆ ತಿರುಗೇಟು ನೀಡಲು ಮಾಸ್ಟರ್ ಪ್ಲಾನ್ ನೊಂದಿಗೆ ಮುಂದಾದ ಜೆಡಿಎಸ್

ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಇದರ ಜೊತೆಗೆ ಪಕ್ಷಾಂತರ ಪರ್ವಕ್ಕೂ ಚಾಲನೆ ದೊರೆತಿದೆ. ಈಗಾಗಲೇ ಕೆಲ ಶಾಸಕರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾತೃ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಮಧ್ಯೆ ಇನ್ನೂ ಹಲವು ಶಾಸಕರು ಇದೇ ಹಾದಿಯಲ್ಲಿದ್ದಾರೆನ್ನಲಾಗಿದೆ.
ಇದರ ನಡುವೆ ತಮ್ಮ ಪಕ್ಷದ ಕೆಲ ಶಾಸಕರನ್ನು ಕಾಂಗ್ರೆಸ್ ಸೆಳೆದುಕೊಂಡಿರುವುದು ಜೆಡಿಎಸ್ ನಾಯಕರನ್ನು ಕೆರಳಿಸಿದ್ದು, ಹೀಗಾಗಿ ರಾಜ್ಯ ಸಚಿವ ಸಂಪುಟದಲ್ಲಿರುವ ಸಚಿವರೊಬ್ಬರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಮೂಲಕ ತಿರುಗೇಟು ನೀಡಲು ಜೆಡಿಎಸ್ ಮುಂದಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಈ ಸಚಿವರು ಅಸಮಾಧಾನ ಹೊಂದಿದ್ದ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ಸಚಿವರನ್ನು ಸಂಪರ್ಕಿಸಿದ್ದಾರೆನ್ನಲಾಗಿದೆ. ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಚಿವರು ಕಾದು ನೋಡುವ ತಂತ್ರವನ್ನನುಸರಿಸುತ್ತಿದ್ದು,ಜೆಡಿಎಸ್ ನಾಯಕರ ಕಾರ್ಯತಂತ್ರ ಯಶಸ್ವಿಯಾಗುತ್ತದೆ ಎಂಬ ಸುಳಿವು ಮೂಲಗಳಿಂದ ತಿಳಿದು ಬಂದಿದೆ.
Comments