ಚುನಾವಣೆಯಲ್ಲಿ ಯಾರ ವಿರುದ್ಧ ಸ್ಪರ್ಧಿಸಲಿಚ್ಚುಸುತ್ತೀರಿ ಎಂದಾಗ ಪ್ರಥಮ್ ಹೇಳಿದ್ದು ಹೀಗೆ ..

ರಾಜಕೀಯಕ್ಕೆ ಧುಮುಕುವ ಹಂಬಲ ಹೊಂದಿರುವ ಪ್ರಥಮ್ ತಾವು ಯಾರ ವಿರುದ್ಧ ಸ್ಪರ್ದಿಸಲು ಬಯಸುತ್ತೀರಾ ಎಂದಾಗ ಕೊಟ್ಟ ಉತ್ತರವಿದು. ಹೌದು ನಮ್ಮ ರಾಜ್ಯಕ್ಕೆ ಹೆಮ್ಮೆ, ರೈತ ಪರ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನಾಲಗೆ ಹರಿಬಿಟ್ಟ ಜಮೀರ್ ಅಹ್ಮದ್ ಸೋಲಿಸಬೇಕುದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆಗೆ ಕಾರಣರಾಗಿರ ಸಚಿವ ರಮಾನಾಥ್ ರೈ ಸೋಲಬೇಕು ಎಂಬುದು ನನ್ನ ಅನಿಸಿಕೆ ಎಂದು ಬಿಲ್ಡಪ್ ಪ್ರಥಮ್ ಹೇಳಿದರು.
ಎಂ ಬಿ ಪಾಟೀಲ- ಪ್ರತ್ಯೇಕ ಧರ್ಮ ಹುಟ್ಟು ಹಾಕಿತ್ತೀನಿ ಎಂದು ಹೇಳಿ ಅಖಂಡ ಹಿಂದೂತ್ವ ವಿಭಜನೆಗೆ ಯತ್ನಿಸುತ್ತಿದ್ದಾರೆ. ಅವರನ್ನು ಸೋಲಿಸಬೇಕು. ಹನೂರು ಕ್ಷೇತ್ರದ ವಿಷಯಕ್ಕೆ ಬಂದರೆ, ಅದು ನನ್ನ ಊರು, ನನ್ನ ಜನರಿದ್ದಾರೆ. ವಿ ಸೋಮಣ್ಣ ಅವರು ಇಲ್ಲಿ ಟಿಕೆಟ್ ಗೆ ಯತ್ನಿಸುತ್ತಿದ್ದಾರೆ ಎಂಬ ಮಾತಿದೆ. ಆದರೆ, ಅವರು ವಿ ಸೋಮಣ್ಣ ಅವರು ಪುಟ್ಟಣ್ಣ ಕಣಗಾಲ್ ಇದ್ದಂತೆ ನಾನು ವಿಷ್ಣುವರ್ಧನ್ ಇದ್ದಂಗೆ. ಪರಿಷತ್ ಸದಸ್ಯರಿಗೆ ಟಿಕೆಟ್ ಇಲ್ಲ ಎಂಬ ಮಾತಿದೆ. ಹೀಗಾಗಿ, ನನ್ನ ಪ್ರಯತ್ನ ಮುಂದುವರೆದಿದೆ. ಸಿನಿಮಾಗಿಂತ ನನ್ನ ಆಸಕ್ತಿ ಕ್ಷೇತ್ರ ಅಥವಾ ವೃತ್ತಿ ರಾಜಕೀಯ ಕ್ಷೇತ್ರ ಮನೆಯಲ್ಲಿ ವಿರೋಧವಿದೆ. ಬಿಗ್ ಬಾಸ್ ಆಯ್ತು, ಸಿನಿಮಾ ಕೈಲಿದೆ. ಊರಲ್ಲಿ ತೋಟ ನೋಡಿಕೊಂಡು ಇರು, ರಾಜಕೀಯಕ್ಕೆ ಬಂದರೆ ವಿರೋಧ ಹೆಚ್ಚಾಗುತ್ತದೆ ಇದು ನಮ್ಮದ್ದಲ್ಲದ ಕ್ಷೇತ್ರ, ಕ್ಯಾನ್ವಸ್ ಹೋಗು ಎಂದು ಕಿವಿಮಾತು ಹೇಳಿದ್ದಾರೆ. ನನಗೆ ಸಿನಿಮಾಗಿಂತಲೂ ರಾಜಕೀಯವೇ ಹೆಚ್ಚು ಆಸಕ್ತಿಯ ಕ್ಷೇತ್ರ, ಯಾವ ಪಕ್ಷ ಟಿಕೆಟ್ ಕೊಟ್ಟರೂ ಸರಿ, ಇಲ್ಲವಾದರೆ ಪಕ್ಷೇತರವಾಗಿಯಾದರೂ ಚುನಾವಣೆಗೆ ಸ್ಪರ್ಧಿಸುತ್ತೇನೆ, ಕೈಲಿರುವ ಸಿನಿಮಾಗಳನ್ನು ಮುಗಿಸಿಕೊಂಡು ಆಮೇಲೆ ಫುಲ್ ಟೈಂ ರಾಜಕಾರಣಿಯಾಗುತ್ತೇನೆ ಎಂದಿದ್ದಾರೆ.
Comments