ಚುನಾವಣಾ ಅಖಾಡಕ್ಕಿಳಿಯಲಿರುವ ಬಿಜೆಪಿಯ 40 ಅಭ್ಯರ್ಥಿಗಳ ಪಟ್ಟಿ ಪ್ರಕಟ...!!

ಅಮಿತ್ ಶಾ ರಚನೆ ಮಾಡಿರುವ ತಂಡ ರಾಜ್ಯದಲ್ಲಿ ಮೂರು ಸಮೀಕ್ಷೆ ನಡೆಸುತ್ತಿದೆ. ಎರಡು ಸಮೀಕ್ಷೆಗಳು ಈಗಾಗಲೇ ಮುಕ್ತಾಯಗೊಂಡಿವೆ. ಇನ್ನೊಂದು ಸಮೀಕ್ಷೆ ಬಳಿಕ ಯಾರಿಗೆ ಟಿಕೆಟ್? ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಎಂಬ ಸುದ್ದಿ ಹರಿದಾಡುತ್ತಿದೆ. ಈ ಪಟ್ಟಿಯಲ್ಲಿ 40 ಅಭ್ಯರ್ಥಿಗಳ ಹೆಸರಿದ್ದು, ಬಹುತೇಕರು ಹಾಲಿ ಶಾಸಕರಾಗಿದ್ದಾರೆ. ಆದರೆ, ಈ ಪಟ್ಟಿ ನಿಜವೋ, ಸುಳ್ಳೋ ಎಂದು ಪಕ್ಷವಾಗಲಿ, ಪಕ್ಷದ ನಾಯಕರಾಗಲಿ ಪ್ರತಿಕ್ರಿಯೆ ಕೊಟ್ಟಿಲ್ಲ. ಯಾರಿಗೆ ಎಲ್ಲಿ, ಟಿಕೆಟ್?
ಬೆಂಗಳೂರಿನ ಮಲ್ಲೇಶ್ವರಂ - ಅಶ್ವಥ್ ನಾರಾಯಣ, ಬಸವನಗುಡಿ - ರವಿ ಸುಬ್ರಮಣ್ಯ, ದಾಸರಹಳ್ಳಿ-ಎಸ್.ಮುನಿರಾಜು, ಚಿತ್ರದುರ್ಗ - ಜಿ.ಎಚ್.ತಿಪ್ಪಾರೆಡ್ಡಿ ಅಭ್ಯರ್ಥಿಗಳು. ಹರಪನಹಳ್ಳಿ - ಕೊಟ್ರೇಶ್, ಮಾಯಕೊಂಡ -ಪ್ರೊ.ಲಿಂಗಣ್ಣ, ಚನ್ನಗಿರಿ - ಮಾಡಾಳು ವಿರೂಪಾಕ್ಷಪ್ಪ, ಚಿಕ್ಕನಾಯಕನಹಳ್ಳಿ - ಜಿ.ಮಾಡುಸ್ವಾಮಿ ಗುಬ್ಬಿ- ಬೆಟ್ಟಸ್ವಾಮಿ, ಅಫಜಲ್‌ಪುರ - ಎಂ.ಐ.ಪಾಟೀಲ್, ಸುರಪುರ - ರಾಜು ಗೌಡ, ಗುರುಮಿಠಕಲ್ - ವೆಂಕಟ್ ರೆಡ್ಡಿ, ಗುಲಬರ್ಗಾ ದಕ್ಷಿಣ - ದತ್ತಾತ್ರೇಯ ಪಾಟೀಲ್ , ಗುಲ್ಪರ್ಗ ಗ್ರಾಮೀಣ-ರೇವು ನಾಯಕ್ ಬೆಳಮಗಿ, ಔರಾದ್-ಪ್ರಭು ಚೌವ್ಹಾಣ್, ದೇವದುರ್ಗ-ಶಿವನಗೌಡ ನಾಯಕ್, ಕುಷ್ಟಗಿ-ದೊಡ್ಡನಗೌಡ ಪಾಟೀಲ್, ಯಲಬುರ್ಗ-ಹಾಲಪ್ಪ ಆಚಾರ್, ಹಗರಿಬೊಮ್ಮನಹಳ್ಳಿ-ನೇಮಿರಾಜ ನಾಯಕ್. ಬೈಂದೂರು-ಜಯಪ್ರಕಾಶ್ ಹೆಗಡೆ, ಕುಂದಾಪುರ-ಹಲಾಡಿ ಶ್ರೀನಿವಾಸ ಶೆಟ್ಟಿ,ಕಾರ್ಕಳ-ಸುನೀಲ್ ಕುಮಾರ್, ಸುಳ್ಯ-ಅಂಗಾರ, ಕೊಡಗು-ಅಪ್ಪಚ್ಚು ರಂಜನ್, ತೀರ್ಥಹಳ್ಳಿ-ಆರಗ ಜ್ಞಾನೇಂದ್ರ, ತರೀಕೆರೆ-ಡಿ.ಎಸ್.ಸುರೇಶ್. ನಿಪ್ಪಾಣಿ-ಶಶಿಕಲಾ ಜೊಲ್ಲೆ, ಬೈಲ ಹೊಂಗಲ-ವಿಶ್ವನಾಥ್ ಪಾಟೀಲ್, ಸವದತ್ತಿ -ಆನಂದ್ ಮಾಮನಿ, ರಾಮದುರ್ಗ-ಮಹದೇವಪ್ಪಎಡವಾಡು, ತೆರೆದಾಳ-ಸಿದ್ದುಸವದಿ, ಬಾಗಲಕೋಟೆ-ವೀರಣ್ಣ ಚಿರಂತಿಮಠ. ಇಂಡಿ-ರವಿಕಾಂತ ಪಾಟೀಲ, ಶಿರಹಟ್ಟಿ-ಭೀಮ್ ಸಿಂಗ್ ರಾಥೋಡ್, ಹಳಿಯಾಳ-ಸುನಿಲ್ ಹೆಗಡೆ, ಕಾರವಾರ-ರೂಪಾಲಿ ನಾಯಕ್,ಕುಮಟಾ-ಯಶೋದಾರ್ ನಾಯಕ್, ಶಿರಸಿ-ವಿಶ್ವೇಶ್ವರ ಹೆಗಡೆ ಕಾಗೇರಿ.
Comments