ಚಂದ್ರಗ್ರಹಣವಿರುವ ಕಾರಣ ವಿಶೇಷ ಪೂಜೆ ಸಲ್ಲಿಸಲು ತಮಿಳುನಾಡಿಗೆ ತೆರಳಿರುವ ಎಚ್.ಡಿ. ರೇವಣ್ಣ

ಹೌದು, ಗ್ರಹಣದ ಸಂದರ್ಭದಲ್ಲಿ ಪೂಜೆ ಪುನಸ್ಕಾರಕ್ಕಾಗಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಪತ್ನಿ ಭವಾನಿ ಸಮೇತರಾಗಿ ದೇವಸ್ಥಾನಗಳಿಗೆ ಹೊರಟಿದ್ದಾರೆ. ಬುಧವಾರದಿಂದ 2 ದಿನಗಳ ಕಾಲ ತಮಿಳುನಾಡಿನ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಲಿರುವ ರೇವಣ್ಣ ದಂಪತಿ ಗ್ರಹಣ ಮುಗಿದ ಬಳಿಕ ವಿಶೇಷ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಧಾರ್ಮಿಕ ವಿಚಾರದಲ್ಲಿ ಯಾವಾಗಲೂ ಮುಂದಿರುತ್ತದೆ. ಯಾವುದೇ ಧಾರ್ಮಿಕ ವಿಶೇಷ ಸಂದರ್ಭಗಳಲ್ಲೂ ವಿಶೇಷ ಪೂಜೆ ಪುನಸ್ಕಾರದ ಮೂಲಕ ಗಮನ ಸೆಳೆಯುತ್ತಾರೆ. ಈ ಹಿಂದೆ ಆದಿಚುಂಚನಗಿರಿಯಲ್ಲಿ ಕಾಲಭೈರವೇಶ್ವರನಿಗೆ ಅಮಾವಾಸ್ಯೆ ಪೂಜೆ ಮೂಲಕವೂ ಈ ಕುಟುಂಬ ಸುದ್ದಿಯಾಗಿತ್ತು. ಇದೀಗ, ಮಾಜಿ ಸಚಿವ ಎಚ್.ಡಿ. ರೇವಣ್ಣ ಗ್ರಹಣದ ವಿಶೇಷ ಪೂಜೆಗಾಗಿ ಮುಂದಾಗಿದ್ದಾರೆ. ಈ ಮಧ್ಯೆ, ಚಂದ್ರಗ್ರಹಣದ ನಿಮಿತ್ತ ದೇವೇಗೌಡರ ಮನೆಯಲ್ಲೂ ವಿಶೇಷ ಪೂಜೆ ಪುನಸ್ಕಾರ ನೆರವೇರಲಿದೆ. ಪದ್ಮನಾಭನಗರದ ನಿವಾಸದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ವಿಶೇಷ ಪೂಜೆ ನೆರವೇರಿಸಲಿದ್ಧಾರೆ. ಇತ್ತೀಚೆಗಷ್ಟೆ ಶೃಂಗೇರಿಯಲ್ಲಿ ಒಂದು ವಾರಗಳ ಕಾಲ ವಿಶೇಷ ಹೋಮ ಹವನ ನಡೆಸಿದ್ದ ದೇವೇಗೌಡರು, ಈಗ ತಮ್ಮ ನಿವಾಸದಲ್ಲಿ ಹುಣ್ಣಿಮೆ ದಿನ ಸತ್ಯನಾರಾಯಣ ವ್ರತ ನಡೆಸುತ್ತಿದ್ಧಾರೆ.
Comments