ಸಿಎಂ ಸಿದ್ದರಾಮಯ್ಯ ಗೆ ಟಾಂಗ್ ಕೊಟ್ಟ ದೇವೇಗೌಡ್ರು

ಕುರುಬರನ್ನ ತಲೆಯ ಮೇಲೆ ಹೊತ್ತುಕೊಂಡು ಬೀದಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದೇನೆ. ನಾನು ಯಾವ ಜಾತಿಯವರಿಗೆ ಮೋಸ ಮಾಡಿದ್ದೇನೆ ತಿಳಿಸಿ ಎಂದು ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು ಮಾಗಡಿಯಲ್ಲಿ ಸಿಎಂ ಸಿದ್ದರಾಮಯ್ಯನವರನ್ನ ಪ್ರಶ್ನಿಸಿದ್ದಾರೆ.
ಜೆಡಿಎಸ್ ನ ನೂತನ ಕಚೇರಿ ಹಾಗೂ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮವನ್ನ ಎಚ್.ಡಿ.ದೇವೇಗೌಡರು ಉದ್ಘಾಟಿಸಿದರು.ಇದೇ ವೇಳೆ ಮಾತನಾಡಿದ ಅವರು ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು. ನಿಮ್ಮಪ್ಪನ ಬಿಟ್ಟು ಹೊರಗಡೆ ಬಾ ನಿನ್ನ ಮುಖ್ಯಮಂತ್ರಿ ಮಾಡ್ತೀವಿ ಅಂತಾ ಕ್ಷೇತ್ರದ ಮಹಾನುಭಾವರು ಕುಮಾರಸ್ವಾಮಿಗೆ ಹೇಳ್ತಾರೆ. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಕೂಟಗಲ್ ಬಳಿ ಇದೇ ಬಾಲಕೃಷ್ಣ ಸೋತರೇ ನಾನು ಸೋತಂತೆ ಎಂದು ಕಣ್ಣೀರು ಹಾಕಿದರು. ಇದೀಗ ನನ್ನ ವಿರುದ್ದ ಕುಮಾರಸ್ವಾಮಿ ಬೇಕಾದ್ರೆ ಸ್ಪರ್ಧೆ ಮಾಡಲಿ ಗೆಲ್ಲುತ್ತೇನೆ ಅಂತಾರೆ ಎಂದು ಶಾಸಕ ಬಾಲಕೃಷ್ಣ ವಿರುದ್ದ ಹರಿಹಾಯ್ದರು.ಅಲ್ಲದೇ ಸಿಎಂ ಸಿದ್ದರಾಮಯ್ಯ ವಿರುದ್ದವೂ ವಾಗ್ದಾಳಿ ನಡೆಸಿ ಕುರುಬರನ್ನ ತಲೆ ಮೇಲೆ ಹೊತ್ತು ಮೆರವಣಿಗೆ ಮಾಡಿದ್ದೇನೆ. ವ್ಯಕ್ತಿಯನ್ನ ಶಕ್ತಿ ಅಂತಾ ಹೇಳ್ದೆ, ನೀವು ಹೋದ್ರಿ ಸಿಎಂ ಆದ್ರಿ ಸಂತೋಷ. ಆದರೆ ಜೆಡಿಎಸ್ ಪಕ್ಷವನ್ನು ತುಳಿಯೋದು ಯಾವ ನ್ಯಾಯ. ನಾನು ಯಾರಿಗೆ ದ್ರೋಹ ಮಾಡಿದ್ದೇನೆ ಅಂತಾ ನೀವೆ ಹೇಳಿ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು. ಅಲ್ಲದೇ ಹತ್ತಾರು ವರ್ಷಗಳಿಂದ ಹಲವು ಪೆಟ್ಟು ತಿಂದಿದ್ದೇನೆ. ದೇವೇಗೌಡರ ಕಾಲ ಮುಗಿತು ಅಂದ ಸಂದರ್ಭಗಳಲ್ಲಿ ರೈತರು ನನ್ನ ಕೈ ಹಿಡಿದಿದ್ದಾರೆ.ಈ ದೇಶದಲ್ಲಿ ಮತ್ತೊಬ್ಬ ದೇವೇಗೌಡ ಹುಟ್ಟಿಬರಲು ಸಾದ್ಯವಿಲ್ಲ ಎಂದಿದ್ದಾರೆ.
Comments