ರಾಮನಗರದಲ್ಲಿ ಬಾಲಕೃಷ್ಣಗೆ ಟಾಂಗ್ ಕೊಡಲು ಮುಂದಾದ ದೇವೇಗೌಡ್ರು



ರಾಮನಗರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ರಂಗೇರಿದೆ. ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಎಚ್.ಸಿ.ಬಾಲಕೃಷ್ಣ ಗೆ ಟಾಂಗ್ ಕೊಡುವ ಹಿನ್ನೆಲೆ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಜೆಡಿಎಸ್ ಅಭ್ಯರ್ಥಿ ಎ.ಮಂಜು ಪರ ಪ್ರಚಾರ ಆರಂಭಿಸಿದ್ದಾರೆ.
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ನೂತನ ಜೆಡಿಎಸ್ ಭವನಕ್ಕೆ ದೇವೇಗೌಡರು ಇಂದು ಚಾಲನೆ ಕೊಟ್ಟರು. ಇದೇ ವೇಳೆ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ಕ್ಷೇತ್ರಕ್ಕೆ ಆಗಮಿಸಿದ ದೇವೇಗೌಡರನ್ನು ಬೈಕ್ ಜಾಥಾ ಮೂಲಕ ಸಾವಿರಾರು ಕಾರ್ಯಕರ್ತರು ವೇದಿಕೆಗೆ ಕರೆ ತಂದರು.ಇದೇ ವೇಳೆ ಜೆಡಿಎಸ್ ಅಭ್ಯರ್ಥಿ ಎ.ಮಂಜು ಮಾತನಾಡಿ, ರಾಜ್ಯಕ್ಕೆ ಕುಮಾರಣ್ಣ ಮುಖ್ಯಮಂತ್ರಿ, ಮಾಗಡಿಗೆ ಎ.ಮಂಜು ಅವರನ್ನು ಆಯ್ಕೆ ಮಾಡಿರಿ ಎನ್ನುವ ಮೂಲಕ ಶಾಸಕ ಬಾಲಕೃಷ್ಣಗೆ ನೇರವಾಗಿಯೇ ಟಾಂಗ್ ನೀಡಿದರು. ಮಾಗಡಿ ಅಭಿವೃದ್ಧಿಗಾಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದರೇ ಮಾತ್ರ ಸಾಧ್ಯ ಎಂದರು.
Comments