ಕ್ಯಾತೆ ತೆಗೆಯುವುದೇ ಗೋವಾಗೆ ಹವ್ಯಾಸವಾಗಿದೆ ಎಂದು ಕಿಡಿಕಾರಿದ ಸಿಎಂ ಸಿದ್ಧರಾಮಯ್ಯ
ಮಹದಾಯಿಯ 45 ಟಿಎಂಸಿ ಅಡಿ ನೀರು ನಮ್ಮ ರಾಜ್ಯದಲ್ಲೇ ಉತ್ಪತ್ತಿಯಾಗುತ್ತದೆ. ಅಂದರೆ ಮಳೆಯಿಂದಾಗಿ ಈ ನೀರು ನದಿ ಸೇರುತ್ತದೆ. ಅಲ್ಲದೆ 200 ಟಿಎಂಸಿ ಅಡಿ ನೀರು ಸಮುದ್ರದ ಪಾಲಾಗುತ್ತಿದೆ. ಇದನ್ನು ಗೋವಾ ಅಥವಾ ಮಹಾರಾಷ್ಟ್ರ ಬಳಸಿಕೊಳ್ಳುತ್ತಿಲ್ಲ.ಹಾಗಿದ್ದೂ ಸಹ ನಮ್ಮ ಪಾಲೀನ ನೀರಿನ ಹಕ್ಕಿಗಾಗಿ ಕೇಳುತ್ತಿರುವ 7.56 ಟಿಎಂಸಿ ನೀರನ್ನು ಕೊಡುತ್ತಿಲ್ಲ ಎಂದು ಹರಿಹಾಯ್ದರು
ಮಹದಾಯಿ ವಿಷಯದಲ್ಲಿ ನಿರ್ಣಯ ಕೈಗೊಳ್ಳಲು ನ್ಯಾಯಾಧೀಕರಣವಿದೆ. ನ್ಯಾಯಾಲಯವೂ ಇದೆ. ಒಂದು ರಾಜ್ಯಕ್ಕೆ ಕದ್ದು ಬಂದು ನೋಡಿಕೊಂಡು ಹೋದವರಿಗೆ ಉತ್ತರ ಕೊಡಬೇಕಾಗಿಲ್ಲ. ಅನಗತ್ಯ ಕ್ಯಾತೆ ತೆಗೆಯುವುದೇ ಅವರಿಗೆ ಹವ್ಯಾಸವಾಗಿದೆ ಎಂದು ಕಿಡಿಕಾರಿದರು.ಮಹದಾಯಿ ನದಿ ಪಾತ್ರದಲ್ಲಿ ನಿಯಮ ಉಲ್ಲಂಘಿಸಿ ಕಾಲುವೆ ನಿರ್ಮಿಸಿಲ್ಲ. ಗೋವಾ ರಾಜ್ಯದ ಯಾವುದೇ ನಿರ್ಣಯ ನಮಗೆ ಸಂಬಂಧಪಡುವುದಿಲ್ಲ. ಮಹದಾಯಿ ವಿವಾದ ನ್ಯಾಯಾಧೀಕರಣದ ಮುಂದಿದ್ದು, ವಿಚಾರಣೆ ಹಂತದಲ್ಲಿದೆ. ಫೆ.6ರಿಂದ ವಿಚಾರಣೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ಮಹದಾಯಿ ನದಿ ಪಾತ್ರದ ಕಣಕುಂಬಿಗೆ ಕದ್ದು ಬಂದಿದ್ದಾರೆ. ಹೇಳಿ ಬಂದಿದ್ದರೆ ಶಿಷ್ಟಾಚಾರದ ಪ್ರಕಾರ ವ್ಯವಸ್ಥೆ ಮಾಡುತ್ತಿದ್ದೆವು. ಒಂದು ರಾಜ್ಯದವರು ಮತ್ತೊಂದು ರಾಜ್ಯಕ್ಕೆ ಹೋಗುವಾಗ ಹೇಳಿ ಹೋಗುವ ಸೌಜನ್ಯ ಇರಬೇಕು. ಆದರೆ, ಕದ್ದು ಬಂದಿರುವುದನ್ನು ತಾವು ಖಂಡಿಸುತ್ತೇವೆ ಎಂದರು. ಮಹದಾಯಿ ನದಿ ಪಾತ್ರದಲ್ಲಿ ನಿಯಮ ಉಲ್ಲಂಘಿಸಿ ಕಾಲುವೆ ನಿರ್ಮಿಸಿಲ್ಲ. ಗೋವಾ ರಾಜ್ಯದ ಯಾವುದೇ ನಿರ್ಣಯ ನಮಗೆ ಸಂಬಂಧಪಡುವುದಿಲ್ಲ. ಮಹದಾಯಿ ವಿವಾದ ನ್ಯಾಯಾಧೀಕರಣದ ಮುಂದಿದ್ದು, ವಿಚಾರಣೆ ಹಂತದಲ್ಲಿದೆ. ಫೆ.6ರಿಂದ ವಿಚಾರಣೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ಮಹದಾಯಿ ನದಿ ಪಾತ್ರದ ಕಣಕುಂಬಿಗೆ ಕದ್ದು ಬಂದಿದ್ದಾರೆ. ಹೇಳಿ ಬಂದಿದ್ದರೆ ಶಿಷ್ಟಾಚಾರದ ಪ್ರಕಾರ ವ್ಯವಸ್ಥೆ ಮಾಡುತ್ತಿದ್ದೆವು. ಒಂದು ರಾಜ್ಯದವರು ಮತ್ತೊಂದು ರಾಜ್ಯಕ್ಕೆ ಹೋಗುವಾಗ ಹೇಳಿ ಹೋಗುವ ಸೌಜನ್ಯ ಇರಬೇಕು. ಆದರೆ, ಕದ್ದು ಬಂದಿರುವುದನ್ನು ತಾವು ಖಂಡಿಸುತ್ತೇವೆ ಎಂದರು.
Comments