ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ದಾಖಲೆ ಹೊಂದಿರುವ ಎಚ್ ಡಿಕೆ

30 Jan 2018 1:03 PM | Politics
431 Report

ನಾಡಿನ ಜನತೆಯ ತಲೆ ಮೇಲೆ 2 ಲಕ್ಷ 90 ಸಾವಿರ ಕೋಟಿ ಸಾಲದ ಹೊರೆ ಇದೆ. ಇದೇ ಕರ್ನಾಟಕ ಸರ್ಕಾರದ ಸಾಧನೆಯಾಗಿದೆ. ಸರ್ಕಾರ ಮಾಡಲು ಹೊರಟಿಸುವ ಬಜೆಟ್ ಮಂಡನೆ ಕೇವಲ ತಾತ್ಕಾಲಿಕವಾದುದಾಗಿದೆ. ಮೈಸೂರು ಮಿನರಲ್ ಹಗರಣ ವಿಚಾರವಾಗಿಯೂ ಪ್ರಸ್ತಾಪ ಮಾಡಿದ ಇನ್ನೂ ಕೆಲ ವಿಚಾರ ಬಾಕಿ ಉಳಿದಿದೆ ಎಂದು ಹೇಳಿದ್ದಾರೆ.

ಜೆಡಿಎಸ್ ಮುಖಂಡ ಹೆಚ್'ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 5000 ಕೋಟಿ ರು. ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ ಅವು ಸರ್ಕಾರದ ದಾಖಲೆಗಳು. ಈ ವರೆಗೆ ಸಿಎಂ ಪ್ರತಿಕ್ರಿಯೆ ನೀಡಿಲ್ಲ. ಸಚಿವ ಸಚಿವ ವಿನಯ್ ಕುಲಕರ್ಣಿಗೆ ಬರೆದುಕೊಟ್ಟು ಹೇಳಿಕೆ ಕೊಡಿಸಲಾಗಿದೆ. ಸದ್ಯಕ್ಕೆ ಭ್ರಷ್ಟಾಚಾರದ ವಿಷಯ ಪ್ರಸ್ತಾಪ ಮಾಡುವುದಿಲ್ಲ ಎಂದಿದ್ದಾರೆ. ಅಲ್ಲದೇ ಯಾವುದೇ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಿ ಜನರ ಮನಸಿನ ಗಮನವನ್ನು ಡೈವರ್ಟ್ ಮಾಡಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Edited By

Shruthi G

Reported By

Madhu shree

Comments