ರಾಜ್ಯ ದಲ್ಲಿನ ಬಿಜೆಪಿ ನಾಯಕರಿಗೆ ಕೊಲೆ ಬೆದರಿಕೆ ಪತ್ರ ರವಾನೆ

ಬಿಜೆಪಿ ನಾಯಕ ಮತ್ತು ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದ್ದು ಆಂತಕ ಮೂಡಿಸಿದೆ. ಚಿಕ್ಕಮಗಳೂರಿನ ಬಸವನಹಳ್ಳಿ ರಸ್ತೆಯಲ್ಲಿರುವ ಅವರ ಕಚೇರಿಗೆ ಅಂಚೆ ಮೂಲಕ ಎರಡು ಪುಟಗಳ ಪತ್ರವನ್ನು ಕಳುಹಿಸಲಾಗಿದೆ. ಇನ್ನು ಇದೇ ವೇಳೆ ಬಂದಿರುವ ಬೆದರಿಕೆ ಪತ್ರದಲ್ಲಿ ಸಿ ಟಿ ರವಿ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಲಾಗಿದ್ದು ಇದಲ್ಲದೇ ಬೆದರಿಕೆಎ ಪತ್ರದ ಜತೆಗೆ ಪರ್ವೇಜ್ ಎಂಬಾತನ ಫೋಟೋ ಲಗತ್ತಿಸಲಾಗಿದೆ.
ಬೆದರಿಕೆ ಪತ್ರದಲ್ಲಿ ಸಿ.ಟಿ.ರವಿ ಸೇರಿದಂತೆ ಸಂಸದೆ ಶೋಭಾ ಕರಂದ್ಲಾಜೆ, ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪರಿಗೂ ಬೆದರಿಕೆ ಒಡ್ಡಲಾಗಿದ್ದು, ಶೋಭಾ ಕರಂದ್ಲಾಜೆ ವಿರುದ್ಧ ಅವಾಚ್ಯ ಶಬ್ಧ ಬಳಕೆ ಮಾಡಲಾಗಿದೆ. ಇದಲ್ಲದೆ ವಿಎಚ್ಪಿಯ ಆರು ಮುಖಂಡರ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ. ಬೆದರಿಕೆ ಪತ್ರ ಸಂಬಂಧ ಚಿಕ್ಕಮಗಳೂರು ಎಸ್ ಪಿ ಅಣ್ಣಾ ಮಲೈ ಅವರನ್ನು ಶಾಸಕ, ಮಾಜಿ ಸಚಿವ ಸಿ.ಟಿ.ರವಿ ಅವರು ಭೇಟಿ ಮಾಡಿ ದೂರನ್ನು ನೀಡಲಿದ್ದಾರೆ ಅಂತ ತಿಳಿದು ಬಂದಿದೆ.
Comments