ಮಹಾತ್ಮಗಾಂಧಿ ಅವರ 70 ನೇ ವರ್ಷದ ಪುಣ್ಯಸ್ಮರಣೆ

ಪುಣ್ಯಸ್ಮರಣೆ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ,ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಸೇರಿದಂತೆ ಹಲವು ಮಂದಿ ಗಣ್ಯರು ರಾಜ್ ಘಾಟ್ ನಲ್ಲಿರುವ ಗಾಂಧಿ ಸಮಾಧಿ ಬಳಿ ತೆರಳಿ ನಮನ ಸಲ್ಲಿಸಿದರು.
ಇಂದು ರಾಷ್ಟ್ರಪಿತ ಮಹಾತ್ಮಗಾಂಧಿ ಅವರ 70 ನೇ ವರ್ಷದ ಪುಣ್ಯಸ್ಮರಣೆಯ ದಿನವಾಗಿದ್ದು,ದೇಶಾದ್ಯಂತ ಅವರನ್ನು ಸ್ಮರಿಸಲಾಗುತ್ತಿದೆ. ನಾತುರಾಂ ಗೂಡ್ಸೆ 1948. ಜನವರಿ 30ರಂದು ಮಹಾತ್ಮಗಾಂಧಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಮಹಾತ್ಮಗಾಂಧಿ ಅವರ ಶಾಂತಿ ಮತ್ತು ಅಹಿಂತೆ ತತ್ವಗಳು ಭಾರತ, ವಿಶ್ವಕ್ಕೆ ಮಾತ್ರವಲ್ಲದೇ, ಪ್ರತಿಯೊಬ್ಬ ವ್ಯಕ್ತಿ, ಕುಟುಂಬ ಹಾಗೂ ಸಮಾಜಕ್ಕೂ ಅನ್ವಯವಾಗುತ್ತದೆ. ಅವರ ತತ್ವ ಆದರ್ಶಗಳು ಇಂದಿಗೂ ಪರಿಣಾಮಕಾರಿಯಾಗಿವೆ ಎಂದು ಆಕಾಶವಾಣಿ ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರಮೋದಿ ಗುಣಗಾನ ಮಾಡಿದ್ದರು. ಮಹಾತ್ಮಗಾಂಧಿ ಅವರ ಜೀವನ ಮತ್ತು ಸಂದೇಶ ಎಲ್ಲಾ ಭಾರತೀಯರಿಗೂ ಸ್ಪೂರ್ತಿಯಾಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ತಮ್ಮ ಟೀಟ್ ಸಂದೇಶದಲ್ಲಿ ತಿಳಿಸಿದ್ದಾರೆ. ಮಹಾತ್ಮಗಾಂಧಿ ಅವರ ಮುಕ್ತ , ಜಾತ್ಯತೀತ ಮತ್ತು ಎಲ್ಲರನ್ನೊಳಗೊಂಡ ಭಾರತ ಪರಿಕಲ್ಪನೆಯಲ್ಲಿ ತಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
Comments