ಮಂಡ್ಯ ನಗರದಲ್ಲಿ ಆರಂಭಗೊಂಡ ಅಪ್ಪಾಜಿ ಕ್ಯಾಂಟೀನ್..!!

29 Jan 2018 6:36 PM | Politics
461 Report

ಮಂಡ್ಯ ನಗರದಲ್ಲಿ ಅಪ್ಪಾಜಿ ಕ್ಯಾಂಟೀನ್​ ಆರಂಭವಾಗಿವೆ. ಈಗ ತಾಲೂಕು ಕೇಂದ್ರಗಳಲ್ಲಿಯೂ ಅಪ್ಪಾಜಿ ಕ್ಯಾಂಟೀನ್ ಪ್ರಾರಂಭವಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಅಭಿಮಾನಿಯಾಗಿರುವ ನಾಗೇಶ್ ಎಂಬುವವರು ಈ ಕ್ಯಾಂಟೀನ್ ತೆರೆದಿದ್ದಾರೆ.

ಜಿಲ್ಲೆಯ ಪಾಂಡವಪುರದಲ್ಲಿ ಸಂಸದ ಪುಟ್ಟರಾಜು ಅಪ್ಪಾಜಿ ಕ್ಯಾಂಟೀನ್​ ಅನ್ನು​ ಉದ್ಘಾಟಿಸಿದರು. ಅಪ್ಪಾಜಿ ಕ್ಯಾಟೀನ್ ನಲ್ಲಿ ಕಡಿಮೆ ದರದಲ್ಲಿ ಊಟ, ತಿಂಡಿ ದೊರೆಯಲಿದ್ದು, ಟೀ, ಕಾಫಿ 5 ರೂ. ಮತ್ತು ತಿಂಡಿಗೆ 10 ರೂ. ದರವನ್ನು ನಿಗದಿ ಪಡಿಸಲಾಗಿದೆ. ಇಡ್ಲಿ, ವಡೆ, ಚಿತ್ರಾನ್ನ, ಬಿಸಿಬೇಳೆ ಬಾತ್, ಖಾಲಿದೋಸೆ, ಸೆಟ್ ದೋಸೆ, ಮಸಾಲೆ ದೋಸೆ, ಚಪಾತಿ, ಮುದ್ದೆ, ಅನ್ನಸಾಂಬಾರ್ ಕ್ಯಾಂಟೀನ್‍ನಲ್ಲಿ ದೊರೆಯುತ್ತದೆ. ಇದಕ್ಕೂ ಮೊದಲು ಜಿಲ್ಲೆಯಲ್ಲಿ ಅಭಿಮಾನಿಗಳು ರಮ್ಯಾ ಕ್ಯಾಂಟೀನ್, ಅಣ್ಣಾ ಕ್ಯಾಂಟೀನ್​​ ತೆರೆದು 10 ರೂ.ಗೆ ಊಟ, ತಿಂಡಿ ನೀಡುತ್ತಿದ್ದಾರೆ.

Edited By

Suresh M

Reported By

Madhu shree

Comments