ನಾನು ಜೆಡಿಎಸ್'ನಲ್ಲಿದ್ದಾಗ ಮುಸ್ಲಿಂ ಮತಗಳನ್ನು ಪಡೆಯುವುದ ಕಷ್ಟವಾಗಿತ್ತು : ಜಮೀರ್
ಬಿಜೆಪಿ ತಂತ್ರ ಚನ್ನಾಗಿಯೇ ಇಲ್ಲಿನ ಮುಸ್ಲಿಮರು ಅರಿತಿದ್ದಾರೆ. ರಾಜ್ಯದ ಮುಸ್ಲಿಮರು ಕಾಂಗ್ರೆಸ್ ಪರವಾಗಿದ್ದಾರೆ. ನಾನು ಜೆಡಿಎಸ್'ನಲ್ಲಿದ್ದಾಗ ಮುಸ್ಲಿಂ ಮತಗಳನ್ನು ಪಡೆಯುವುದ ಕಷ್ಟವಾಗಿತ್ತು ಆದರಿಂದು ಕಾಂಗ್ರೆಸ್'ನಲ್ಲಿರುವುದರಿಂದ ಈಗ ಅಂತಹ ತೊಂದರೆ ಇಲ್ಲ ಎಂದಿದ್ದಾರೆ.
ಬಿಜೆಪಿ ಜೊತೆಗೆ ಅಕ್ಬರುದ್ದಿನ್ ಓವೈಸಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎನ್ನುವ ವಿಚಾರವಾಗಿ ಬೆಂಗಳೂರಿನಲ್ಲಿ ಜಮೀರ್ ಅಹಮ್ಮದ್ ಪ್ರತಿಕ್ರಿಯಿಸಿದ್ದಾರೆ. ರಾಜ್ಯಕ್ಕೆ ಯಾವ ಓವೈಸಿ ಬಂದರೂ ಕೂಡ ಏನೂ ಮಾಡಲು ಆಗುವುದಿಲ್ಲ. ಕರ್ನಾಟಕದ ಮುಸ್ಲಿಮರು ಬುದ್ದಿವಂತರು ಎಂದು ಹೇಳಿದ್ದಾರೆ. ಇನ್ನು ಚೆಲುವರಾಯ ಸ್ವಾಮಿ ಮಾತನಾಡಿ, ಮುಸ್ಲಿಂ ವಿರುದ್ಧವಾದ ಚಟುವಟಿಕೆಯನ್ನ ಇಡೀ ದೇಶದಲ್ಲಿ ಬಿಜೆಪಿಯವರು ಮಾಡಿಕೊಂಡು ಬರುತ್ತಿದ್ದಾರೆ. ಅಲ್ಲದೇ ದೇಶದಲ್ಲಿ ನಿಜವಾದ ಜಾತ್ಯಾತೀಯ ಪಕ್ಷ ಎಂದರೆ ಕಾಂಗ್ರೆಸ್ ಒಂದೇ ಎಂದಿದ್ದಾರೆ. ಎಲ್ಲಾ ಧರ್ಮ ಜಾತಿಗಳನ್ನೂ ಒಂದೇ ಎಂದು ಭಾವಿಸಲಾಗುತ್ತದೆ. ಆದರೆ ಬಿಜೆಪಿಯವರು ಮಾತ್ರ ಧರ್ಮವನ್ನು ಎತ್ತಿಕಟ್ಟಿ ಚುನಾವಣೆ ಮಾಡುತ್ತಾರೆ. ಜನರ ವಿಶ್ವಾಸವನ್ನು ಗಳಿಸಿ ಚುನಾವಣೆ ಎದುರಿಸುವುದಿಲ್ಲ. ಇಂತಹ ರಾಜಕಾರಣವೂ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದಿದ್ದಾರೆ.
Comments