ದೇವೇಗೌಡರ ಆಳ್ವಿಕೆಯಲ್ಲಿ ಕುಮಾರಣ್ಣ ಮುಖ್ಯಮಂತ್ರಿ: ಪ್ರಜ್ವಲ್ ರೇವಣ್ಣ

ಇನ್ಮುಂದೆ ದೇವೇಗೌಡರ ಆಳ್ವಿಕೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಜೆಡಿಎಸ್‌ನ ಯುವ ಮುಖಂಡ ಪ್ರಜ್ವಲ್ ರೇವಣ್ಣ ಹೊಸ ಚರ್ಚೆಗೆ ಕಾರಣರಾಗಿದ್ದಾರೆ.
ಜಿಲ್ಲೆಯ ತಿಪಟೂರಿನ ನೊಣವಿಕೆರೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ಮುಂದೆ ದೇವೆಗೌಡರ ಆಳ್ವಿಕೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಹೇಳಿದರು.ಅಲ್ಲದೆ ಇದೇ ವೇಳೆ ಹಳ್ಳಿಯಿಂದ ಹೋದವರೇ ದಿಲ್ಲಿ ಆಳೋರು, ಸಾಧನೆ ಮಾಡೋದು ಎಂದು ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಮೊಮ್ಮಗ ಪ್ರೀತಿ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಾರಿ ರೈತರು, ಯುವಕರು ಜೆಡಿಎಸ್ ಕೈ ಹಿಡಿಯಬೇಕು. ಹಾಗಾದರೆ ಮಾತ್ರ ದೇವೇಗೌಡರ ಆಳ್ವಿಕೆಯಲ್ಲಿ ಕುಮಾರಣ್ಣ ಮುಖ್ಯಮಂತ್ರಿ ಆಗ್ತಾರೆ ಎಂದು ಹೇಳಿದರು.
Comments