ಸಿದ್ದರಾಮಯ್ಯ ಸರ್ಕಾರವನ್ನು ಕಾಮಿಡಿಯಲ್ಲೇ ಜಡಾಯಿಸಿದ ನವರಸನಾಯಕ

ಕುಂದಾಪುರ ತಾಲೂಕಿನ ಬೈಂದೂರು ಹಾಗೂ ಸಿದ್ದಾಪುರ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಮಿಕ ವರ್ಗದ ಸಮಾವೇಶ ಹಾಗೂ ಸಭೆಗಳಲ್ಲಿ ಪಾಲ್ಗೊಂಡ ಜಗ್ಗೇಶ್ ಸಿದ್ದರಾಮಯ್ಯ ಸರ್ಕಾರವನ್ನು ಕಾಮಿಡಿಯಲ್ಲೇ ಜಡಾಯಿಸಿದರು. ಬೈಂದೂರಿನಲ್ಲಿ ಸಿದ್ದರಾಮಯ್ಯ ಧ್ವನಿಯಲ್ಲೇ ಮಿಮಿಕ್ರಿ ಮಾಡಿದ ಜಗ್ಗೇಶ್, ಮೋದಿ ಬಂದರೂ ಹೆದರಕ್ಕಿಲ್ಲ ಎಂದು ಸಿದ್ದರಾಮಯ್ಯ ಹೇಳ್ತಾರಷ್ಟೇ ಆದರೆ ಮನಸ್ಸಿನೊಳಗೆ ಫುಲ್ ವೈಭ್ರೇಷನ್ ಇರತ್ತೆ ಎಂದು ನಟ ಜಗ್ಗೇಶ್ ಲೇವಡಿ ಮಾಡಿದ್ರು.
ಅಷ್ಟರ ಮಟ್ಟಿಗೆ ಶಕ್ತಿ ಸಿದ್ದರಾಮಯ್ಯ ಅವರಲ್ಲಿಲ್ಲ. ಕಾಂಗ್ರೆಸ್ ಕಟ್ಟ ಕಡೆಯ ಸ್ಥಿತಿಗೆ ತಲುಪಿದೆ . ದೇಶದಲ್ಲಿ ಚುನಾವಣೆಗೆ ಹಣ ಸರಬರಾಜು ಮಾಡಲು ಕರ್ನಾಟಕದಲ್ಲೇ ಅವಕಾಶ. ಸೋನಿಯಾ ಗಾಂಧಿ ಕರೆಸಿದ್ರೂ 10ಸಾವಿರಕ್ಕಿಂತ ಹೆಚ್ಚು ಓಟು ಬೀಳಲ್ಲ. ಆದ್ರೆ ದುಡ್ಡು ಕೊಟ್ಟು ಸಮಾವೇಶಕ್ಕೆ ಜನರನ್ನು ಕರೆಸಲಾಗುತ್ತಿದೆ ದುಡ್ಡು ಕೊಟ್ಟು ಕರೆಸಿದ ಜನರು ಓಟ್ ಹಾಕಲ್ಲ ಎಂದು ಲೇವಡಿ ಮಾಡಿದ್ರು.
ಇನ್ನು ಸಿದ್ದಾಪುರದಲ್ಲೂ ರಾಜ್ಯ ಸರ್ಕಾರಕ್ಕೆ ಟಾಂಗ್ ಕೊಟ್ಟ ಜಗ್ಗೇಶ್, ಈ ದೇಶದಲ್ಲಿ ನಾಲ್ಕು ಕಡೆಗಳಲ್ಲಿ ಮಾತ್ರ ಕಾಂಗ್ರೆಸ್ ಸರಕಾರ ಅಧಿಕಾರ ನಡೆಸುತ್ತಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆಶಯದಂತೆ, ಕರ್ನಾಟಕದಲ್ಲಿಯೂ ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡಬೇಕಾಗಿದೆ.
ಕಾಂಗ್ರೆಸ್ ಮುಕ್ತ ಭಾರತದಿಂದ ದೇಶವು ಇನ್ನಷ್ಟು ಬಲಿಷ್ಟವಾಗಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಾಧನೆ ರಾಜ್ಯದಲ್ಲಿ ಜಾತಿ, ಮತ, ಪಂಥಗಳ ಮಧ್ಯೆ ವಿಷ ಬೀಜ ಬಿತ್ತಿ ರಾಜಕಿಯ ಮಾಡುವ ಮೂಲಕ ರಾಜ್ಯ ಸರಕಾರ ಕೇವಲ ಅಸ್ಥಿಪಂಜರದಂತಿದೆ. ಇದಕ್ಕೆ ಆಹಾರ, ನೀರು, ಆಕ್ಸೀಜನ್ ನೀಡಿದರು ಪ್ರಯೋಜನವಾಗಲ್ಲ ಎಂದು ಟೀಕಿಸಿದ್ರು. ರಾಜ್ಯ ಸರ್ಕಾರ ಹಣದ ಹೊಳೆ ಹರಿಸಿ ಸಮಾವೇಶಕ್ಕೆಲ್ಲ ಜನರನ್ನು ಸೇರಿಸುತ್ತಿದ್ದಾರೆ. ಆದ್ರೆ ಹಣ ಪಡೆದ ಜನರು ಮತ ಹಾಕಲ್ಲ ಎಂದು ಜಗ್ಗೇಶ್ ಭವಿಷ್ಯ ನುಡಿದ್ರು. ಒಟ್ಟಾರೆ ಕುಂದಾಪುರದಲ್ಲಿ ನಡೆದ ಜಗ್ಗೇಶ್ ಉಪಸ್ಥಿತಿ ನಗೆಯ ಹೊಳೆ ಹರಿಸಿದ್ದಂತು ಸತ್ಯ.
Comments