ಎಚ್.ಡಿ.ದೇವೇಗೌಡರ ಸಾಧನೆಯ ಬಗ್ಗೆ ಮಾತನಾಡಿದ ಎ.ಮಂಜುಗೆ ಟಾಂಗ್ ಕೊಟ್ಟ ಪಿ.ಜಿ.ಆರ್.ಸಿಂಧ್ಯ
ಜೆಪಿ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪಿ. ಜಿ. ಆರ್. ಸಿಂಧ್ಯ ಅವರು 'ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರ ಸಂಸ್ಕತಿಯನ್ನು ತೋರಿಸುತ್ತದೆ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ದೇವೇಗೌಡರ ಬಗ್ಗೆ ಹಗುರವಾಗಿ ಸಚಿವ ಮಂಜು ಮಾತನಾಡಿರುವುದು ಸರಿಯಲ್ಲ ಎಂದರು. ದೇವೇಗೌಡರು ಎಲ್ಲಿ, ಮಂಜು ಅವರು ಎಲ್ಲಿ ಎಂದು ವ್ಯಂಗ್ಯವಾಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸಾಧನೆ ಏನು..? ಅವರು ಎಂತಹವರು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ಹೇಳಿದರು. ಇನ್ನು ಆನಂತ್ ಕುಮಾರ್ ಅವರ ಬಗ್ಗೆ ಮಾತನಾಡಿದ ಸಿಂಧ್ಯ ರವರು ನಮ್ಮ ರಾಷ್ಟ್ರದ ಸಂವಿಧಾನ ಅತ್ಯುತ್ತಮವಾಗಿದ್ದು, ಅದನ್ನು ಬದಲಾವಣೆ ಮಾಡುತ್ತೇವೆ ಎನ್ನುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೇಳಿಕೆಯನ್ನು ಖಂಡಿಸಿದರು. ಹಾಸನ ಜಿಲ್ಲೆಗೆ ಸಚಿವ ಮಂಜು ಅವರು ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಹೇಳಬೇಕು. ದೇವೇಗೌಡರ ಕೊಡುಗೆ ಏನು ಎಂಬುದು ಹಾಸನ ಜಿಲ್ಲೆ ಹಾಗೂ ರಾಷ್ಟ್ರದ ಜನತೆಗೆ ತಿಳಿದಿದೆ. ಹೀಗಿರುವಾಗ ಸಚಿವ ಮಂಜು ಅವರಿಂದ ಸರ್ಟಿಫಿಕೆಟ್ ಪಡೆಯಬೇಕಾಗಿಲ್ಲ. ಯಾರ ಋಣದಲ್ಲಿ ಯಾರಿದ್ದಾರೆ ಎಂಬುದು ಜನರಿಗೆ ಗೊತ್ತಿದೆ.
ಮುಂದಿನ ದಿನಗಳಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಸಿಂಧ್ಯ ವಾಗ್ದಾಳಿ ನಡೆಸಿದರು.
Comments